SUV Scooter : ಭಾರತದಲ್ಲಿ ಕಾರಿನ ರೀತಿ ಇರೋ SUV ಸ್ಕೂಟರ್ ಬಿಡುಗಡೆ – ಬೆಲೆ ತುಂಬಾ ಕಡಿಮೆ, ವೈಶಿಷ್ಟ್ಯತೆ ಕೇಳಿದ್ರೆ ಹುಬ್ಬೇರುತ್ತೆ

Share the Article

 

SUav Scooter : ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ಕೊಮಾಕಿ (Komaki), FAM1.0 ಮತ್ತು FAM2.0 ಎಂಬ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ.

 

ಹೌದು, ಕುಟುಂಬ ಸವಾರಿಗಾಗಿ ವಿನ್ಯಾಸಗೊಳಿಸಲಾಗಿರುವ ದೇಶದ ಮೊದಲ ಎಸ್​ಯುವಿ ಸ್ಕೂಟರ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಮೂರು ಚಕ್ರಗಳ ಸ್ಕೂಟರ್ ಅನ್ನು ದೇಶೀಯ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಬಹುದು ಎಂದು ಕಂಪೆನಿ ಹೇಳಿದೆ.

 

ಬೆಲೆ ಎಷ್ಟು?

FAM1.0 ನ ಎಕ್ಸ್-ಶೋರೂಂ ಬೆಲೆ 99,999 ರೂ., ಮತ್ತು FAM2.0 ನ ಎಕ್ಸ್-ಶೋರೂಂ ಬೆಲೆ 1,26,999 ರೂ.

 

ಬ್ಯಾಟರಿ ವ್ಯವಸ್ಥೆ:

ಎರಡೂ ಸ್ಕೂಟರ್‌ಗಳು Lipo4 ಬ್ಯಾಟರಿಗಳನ್ನು ಬಳಸುತ್ತವೆ, ಇದು ಅವುಗಳನ್ನು ವಿಶಿಷ್ಟವಾಗಿಸಿದೆ. ಈ ಬ್ಯಾಟರಿಗಳು 3,000 ರಿಂದ 5,000 ಚಾರ್ಜ್ ಸೈಕಲ್‌ಗಳವರೆಗೆ ಬಾಳಿಕೆ ಬರುತ್ತವೆ. ಇದು ಸಾಮಾನ್ಯವಾದ ವಿಚಾರವಲ್ಲ. ಈ ಲಿಥಿಯಂ ಬ್ಯಾಟರಿಗಳು ಹಗುರ ಮತ್ತು ಸಾಂದ್ರವಾಗಿರುತ್ತವೆ, ಅಧಿಕ ಬಿಸಿಯಾಗುವಿಕೆ, ಬೆಂಕಿ ಮತ್ತು ಸ್ಫೋಟದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಬ್ಯಾಟರಿಗಳು ವೇಗವಾಗಿ ಚಾರ್ಜಿಂಗ್ ಮಾಡಲು ಅವಕಾಶ ಮಾಡಿಕೊಡುತ್ತವೆ, ಚಾರ್ಜಿಂಗ್‌ಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಈ ಬ್ಯಾಟರಿಗಳು ಪರಿಸರ ಸ್ನೇಹಿಯೂ ಆಗಿವೆ.

 

ಮೈಲೇಜ್ :

FAM 1.0 ಮಾದರಿಯು ಒಂದೇ ಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ನೀಡುತ್ತದೆ, ಅದರಂತೆ FAM 2.0 ಮಾದರಿಯು 200 ಕಿಲೋಮೀಟರ್‌ಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ನೀಡುತ್ತದೆ.

Comments are closed.