Home News RD: ಅಂಚೆ ಕಚೇರಿಯ ಈ ಯೋಜನೆಯಲ್ಲಿ 50 ಸಾವಿರ ಹೂಡಿಕೆ ಮಾಡಿ, 35 ಲಕ್ಷ ಪಡೆಯಿರಿ!!

RD: ಅಂಚೆ ಕಚೇರಿಯ ಈ ಯೋಜನೆಯಲ್ಲಿ 50 ಸಾವಿರ ಹೂಡಿಕೆ ಮಾಡಿ, 35 ಲಕ್ಷ ಪಡೆಯಿರಿ!!

Hindu neighbor gifts plot of land

Hindu neighbour gifts land to Muslim journalist

 

RD: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಛೇರಿಯೋ ಜನರಿಗೆ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಅದರಲ್ಲಿ ಆರ್ ಡಿ ಯೋಜನೆಯು ತುಂಬಾ ಬೆಸ್ಟ್ ಎಂದು ಅನೇಕರು ಹೇಳುತ್ತಾರೆ. I ಈ ಆರ್‌ಡಿ (Recurring Deposit) ಯೋಜನೆಯಲ್ಲಿ ಕೇವಲ 100 ರೂಪಾಯಿಗಳಿಂದ ಹೂಡಿಕೆ (Invest) ಪ್ರಾರಂಭಿಸಬಹುದು. ಅಷ್ಟೇ ಅಲ್ಲ ಕೇವಲ 50,000 ಹೂಡಿಕೆ ಮಾಡಿದ್ರೆ ಬರೋಬ್ಬರಿ 35 ಲಕ್ಷವನ್ನು ಕೂಡ ಪಡೆಯಬಹುದು. ಹಾಗಿದ್ರೆ ಹೇಗೆ ಎಂದು ನೋಡೋಣ ಬನ್ನಿ.

 

ಹೌದು, ಅಂಚೆ ಕಚೇರಿ ಆರ್‌ಡಿ ಯೋಜನೆ ಮೂಲಕ 50,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಬರೀ ಐದು ವರ್ಷಗಳಲ್ಲಿ ಹೆಚ್ಚಿನ ಹಣ ನಿಮ್ಮ ಖಾತೆ ಸೇರುತ್ತದೆ. 50 ಸಾವಿರದಂತೆ 5 ವರ್ಷಗಳಲ್ಲಿ ಒಟ್ಟು 30 ಲಕ್ಷ ರೂಪಾಯಿಗಳು ಜಮಾ ಆಗುತ್ತವೆ. ಇದರೊಂದಿಗೆ ದೊರೆಯುವ ಬಡ್ಡಿಯೊಂದಿಗೆ ನಿಮ್ಮ ಒಟ್ಟು ಮೊತ್ತವು 35 ಲಕ್ಷ ರೂಪಾಯಿಗಳವರೆಗೆ ನೀವು ಪಡೆಯಬಹುದು. ಅಂದರೆ ಐದು ಲಕ್ಷದವರೆಗೆ ನೀವು ಇಲ್ಲಿ ಬಡ್ಡಿಯನ್ನು ಪಡೆಯಬಹುದು.

 

ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ ನೀವು 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯುವ ಅವಕಾಶವಿದೆ. ಅಂದರೆ, ನೀವು ಹೂಡಿಕೆಯ ಮೇಲೆ ತೆರಿಗೆ ಉಳಿತಾಯ ಸಹ ಮಾಡಬಹುದು, ಜೊತೆಗೆ ಸುರಕ್ಷಿತ ಗಳಿಕೆಯನ್ನೂ ಪಡೆಯಬಹುದು. ತೆರಿಗೆ ವಿನಾಯಿತಿಯಲ್ಲೂ ಈ ಯೋಜನೆ ಬೆಸ್ಟ್‌ ಎಂದು ಗುರುತಿಸಿಕೊಂಡಿದೆ.

 

ಇನ್ನು ತುರ್ತು ಅವಶ್ಯಕ್ಕಾಗಿ ಹಣ ವಿಥ್‌ಡ್ರಾ ಮಾಡಬೇಕು ಎಂದೆನಿಸದರೆ, ಒಂದು ವರ್ಷದ ನಂತರ ನಿಮ್ಮ ಜಮಾ ಮಾಡಿದ ಮೊತ್ತದ ಶೇಕಡಾ 50ರಷ್ಟು ಸಾಲವನ್ನು ಸಹ ಪಡೆಯಬಹುದು.