G Parameshwar: ಬಾಜಿ ಕಟ್ಟಿ ದುಡ್ಡು ಕಳೆದುಕೊಂಡ ಗೃಹ ಸಚಿವ ಪರಮೇಶ್ವರ್‌

Share the Article

G Parameshwar: ಕಬ್ಬಡ್ಡಿ ಪಂದ್ಯದಲ್ಲಿ ಬಾಜಿ ಕಟ್ಟಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹಣ ಕಳೆದುಕೊಂಡ ಘಟನೆ ನಡೆದಿದೆ. ಸಚಿವ ಪರಮೇಶ್ವರ್‌ ಅವರು ಜಿಲ್ಲಾಧಿಕಾರಿ ಕಲ್ಯಾಣ್‌ ಅವರ ಜೊತೆ ಬಾಜಿ ಕಟ್ಟಿ ದುಡ್ಡು ಕಳೆದುಕೊಂಡಿದ್ದಾರೆ. ಜಿ ಪರಮೇಶ್ವರ್‌ ಅವರು ಬಾಜಿ ಕಟ್ಟಿ ಸೋತು ರೂ.500 ಕಳೆದುಕೊಂಡಿದ್ದಾರೆ.

ತುಮಕೂರಿನಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ನಡೆದಿದೆ. ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ಮತ್ತು ವಿಜಯಪುರ ತಂಡಗಳು ಮುಖಾಮುಖಿಯಾಗಿತ್ತು. ಇದರಲ್ಲಿ ದಕ್ಷಿಣ ಕನ್ನಡ ತಂಡವು ವಿಜಯಪುರ ತಂಡದ ವಿರುದ್ಧ ಜಯಗಳಿಸಿದೆ.

ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸಿ ಮಾತನಾಡುತ್ತಾ ಪರಮೇಶ್ವರ್‌ ಅವರು ನಾನು ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಜೊತೆ ಬೆಟ್ಟಿಂಗ್‌ ಕಟ್ಟಿದ್ದು, ರೂ.500 ಕಳೆದುಕೊಂಡೆ ಎಂದು ಹೇಳಿದ್ದಾರೆ.

Comments are closed.