Bihar Election : 25ನೇ ವಯಸ್ಸಿನ ಗಾಯಕಿ ಮೈಥಿಲಿ ಠಾಕೂರ್ ಗೆ ಟಿಕೆಟ್ ಕೊಟ್ಟ BJP !!


Bihar Election : ಬಿಹಾರ ವಿಧಾನಸಭಾ ಚುನಾವಣೆ ಚಟುವಟಿಕೆಗಳು ಗರಿ ಗೆದರಿವೆ. ಈಗಾಗಲೇ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಟಿಕೆಟ್ ಹಂಚಿಕೆ ಮಾಡಿಕೊಂಡು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ವೇಳೆ ಬಾರಿ ಅಚ್ಚರಿ ಎನಿಸಿರುವುದು ಕೇವಲ 25 ವರ್ಷದ ಜನಪದ ಗಾಯಕಿಗೆ ಬಿಜೆಪಿ ಟಿಕೆಟ್ ನೀಡಿರುವುದು.
ಹೌದು, 25ನೇ ವಯಸ್ಸಿನ ಮೈಥಿಲಿ ಠಾಕೂರ್ ಎಂಬ ಖ್ಯಾತ ಗಾಯಕಿಗೆ ಬಿಜೆಪಿ ಟಿಕೆಟ್ ನೀಡಿರುವುದು ದೇಶದ ಗಮನ ಸೆಳೆದಿದೆ. ಈ ಪುಟ್ಟ ಪೋರಿಯಾ ಕುರಿತು ಇದೀಗ ಸೋಷಿಯಲ್ ಮೀಡಿಯಾದಲೆಲ್ಲ ಸಾಕಷ್ಟು ವಿಚಾರಗಳು ಬಿತ್ತರವಾಗುತ್ತಿದೆ. ಹಾಗಿದ್ರೆ ಯಾರು ಈ ಮೈಥಿಲಿ ಠಾಕೂರ್, ಈ ಕೈಯ ಆಸ್ತಿ ಎಷ್ಟು ಗೊತ್ತಾ?
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿರುವ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್ ಅಲಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಈಕೆ ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಅಲಿನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿರುವ ಮೈಥಿಲಿ ಠಾಕೂರ್ ಒಟ್ಟು ಆಸ್ತಿ (Movable Assets) 2,32,33,255 ರೂಪಾಯಿ ಎಂದು ಶಪಥ ಪತ್ರದಲ್ಲಿ ತಿಳಿಸಿದ್ದಾರೆ.
ಸದ್ಯ ನಗದು 1.80 ಲಕ್ಷ ರೂಪಾಯಿ, 2 ಕೋಟಿಗೂ ಅಧಿಕ ಮೌಲ್ಯದ ವಾಹನ ಮತ್ತು ಆಭರಣಗಳನ್ನು ಹೊಂದಿರೋದಾಗಿ ತಿಳಿಸಿದ್ದಾರೆ. ಮೈಥಿಲಿ ಬಳಿಯಲ್ಲಿ 47 ಲಕ್ಷ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಮತ್ತು ಸದ್ಯ ಈ ಆಸ್ತಿಯ ಮಾರುಕಟ್ಟೆ ಮೌಲ್ಯ 1.5 ಕೋಟಿ ರೂಪಾಯಿ ಆಗಿದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.
25ನೇ ಜುಲೈ 2000ರಂದು ಜನಿಸಿದ ಮೈಥಿಲಿ ಠಾಕೂರ್ ಅವರ ವಯಸ್ಸು 25 ವರ್ಷ. ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಕ್ಷೇತ್ರದ ಒರೇನ್ ಗ್ರಾಮದ ನಿವಾಸಿಯಾಗಿದ್ದು, ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಭಾರತಿ ಕಾಲೇಜಿನಲ್ಲಿ ಓದಿರುವ ಮೈಥಿಲಿ ಠಾಕೂರ್, ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದುಕೊಂಡಿದ್ದಾರೆ.
ಮೈಥಿಲಿ ಅವರಿಗೆ 2021 ರಲ್ಲಿ ಸಂಗೀತ ನಾಟಕ ಅಕಾಡೆಮಿಯ(ಎಸ್‌ಎನ್‌ಎ) ಪ್ರತಿಷ್ಠಿತ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ ಪ್ರಶಸ್ತಿ ನೀಡಲಾಗಿದೆ.
ಮಧುಬನಿ ಜಿಲ್ಲೆಯ ಬೆನಿಪಟ್ಟಿಯಲ್ಲಿ ಜನಿಸಿದ ಮೈಥಿಲಿ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಹಾಗೂ ಸಾಹಿತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
Comments are closed.