Indhor: ಫೆನಾಯಿಲ್ ಕುಡಿದು 25 ಮಂಗಳಮುಖಿಯರು ಆತ್ಮಹತ್ಯೆಗೆ ಯತ್ನ – ಕಾರಣ ಮಾತ್ರ ಅಚ್ಚರಿ!!

Indhor: 25ಕ್ಕೂ ಹೆಚ್ಚು ಮಂಗಳಮುಖಿಯರು ಫೆನಾಯಿಲ್ ಕುಡಿದು ಆತಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ನಂತರ ಅಸ್ವಸ್ಥರಾದ ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೌದು, ಬುಧವಾರ ರಾತ್ರಿ ಮಂಗಳಮುಖಿಯರು ತಮ್ಮ ವಾಸಸ್ಥಳದಲ್ಲಿ ಸಾಮೂಹಿಕವಾಗಿ ಫಿನಾಯಿಲ್ ಸೇವಿಸಿದ್ದಾರೆ. ನಂತರ ತೀವ್ರವಾಗಿ ಅಸ್ವತ್ಥರಾದ ಅವರನ್‌ಆನು ಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಆಸ್ಪತ್ರೆಗೆ ದಾಖಲಾದ ಟ್ರಾನ್ಸ್ ಜೆಂಡರ್ ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯ ಉಸ್ತುವಾರಿ ಸೂಪರಿಂಟೆಂಡೆಂಟ್ ಇನ್ ಚಾರ್ಜ್ ಡಾಕ್ಟರ್ ಬಸಂತ್ ಕುಮಾರ್ ನಿಂಗ್ವಾಲ್ ಮಾಹಿತಿ ನೀಡಿದ್ದಾರೆ.
ಮಂಗಳಮುಖಿಯರು ಈ ನಿರ್ಧಾರಕ್ಕೆ ಏಕೆ ಬಂದರು? ಇಂತಹ ಸಾಮೂಹಿಕ ಕೃತ್ಯಕ್ಕೆ ಕಾರಣವೇನು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಘಟನೆಯ ಬಗ್ಗೆ ಕೇಳಿದಾಗ ಹೆಚ್ಚುವರಿ ಉಪ ಆಯುಕ್ತ ರಾಜೇಶ್ ದಂಡೋಟಿಯ ತನಿಖೆಯ ನಂತರವೇ ಟ್ರಾನ್ಸ್ ಜೆಂಡರ್ ಸಮುದಾಯದ ಜನ ಯಾವ ವಸ್ತುವನ್ನು ಸೇವಿಸಿದ್ದಾರೆ ಹಾಗೂ ಯಾಕೆ ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
Comments are closed.