RSS: ಸರ್ಕಾರಿ ಸ್ಥಳಗಳಲ್ಲಿ RSS ಕಾರ್ಯಕ್ರಮ ಮಾಡಿದ್ರೆ 1 ಲಕ್ಷ ದಂಡ, 3 ವರ್ಷ ಜೈಲು !! ವಿಧೇಯಕ ಜಾರಿಗೆ ಸರ್ಕಾರ ಸಿದ್ಧತೆ


RSS: ರಾಜ್ಯದಲ್ಲಿ ಆರ್ ಎಸ್ ಎಸ್ ಬ್ಯಾನ್ ಮಾಡುವ ವಿಚಾರ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ. ಸಚಿವ ಪ್ರಿಯಾಂಕರ್ ಗೆ ಹೇಳಿಕೆ ವಿರುದ್ಧ ಇದೀಗ ಸಾಕಷ್ಟು ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಆರ್ ಎಸ್ ಎಸ್ ಕಾರ್ಯಕ್ರಮಗಳನ್ನು ಬ್ಯಾನ್ ಮಾಡುವ ನಿಟ್ಟಿನಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮ ಮಾಡಿದರೆ, ಒಂದು ಲಕ್ಷ ದಂಡ, ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸುವ ವಿಧೇಯಕವನ್ನು ರಾಜ್ಯ ಸರ್ಕಾರ ತರಲು ಚಿಂತನೆ ನಡೆಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಹೌದು, ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧ ಇರಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬೆನ್ನಲ್ಲೆ, ಇದೀಗ ರಾಜ್ಯ ಸರ್ಕಾರ ಹೊಸ ವಿಧೇಯಕ ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದ್ದು, ನಿಯಮ ಮೀರಿ ಚಟುವಟಿಕೆ ನಡೆಸಿದರೆ 2 ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ನಿಯಮ ಮೀರಿದರೆ 3 ವರ್ಷ ಜೈಲು ಶಿಕ್ಷೆ ರೂ. 1, ದಂಡ ವಿಧಿಸಲಾಗುತ್ತದೆ ಇದಕ್ಕೂ ಮೀರಿ ಮುಂದುವರಿದರೆ ನಿತ್ಯ 5 ಸಾವಿರ ತಂಡ ವಿಧಿಸುವ ನಿಯಮ ರೂಪಿಸಲಾಗಿದೆ. ಹೊಸ ಬಿಲ್ ಮೂಲಕ ಆರ್ ಎಸ್ ಎಸ್ ಚಟುವಟಿಕೆಗೆ ಕಡಿವಾಣಕ್ಕೆ ರಾಜ್ಯ ಸರ್ಕಾರ ಇದೀಗ ಮುಂದಾಗಿದೆ ಎನ್ನಲಾಗಿದೆ.
Comments are closed.