SSLC and PUC: ರಾಜ್ಯದ SSLC, PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಪಾಸ್‌ ಆಗಲು ಇನ್ನು ಇಷ್ಟು ಅಂಕ ಗಳಿಸಿದರೆ ಸಾಕು

Share the Article

SSLC and PUC: 2025-26ನೇ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತೀರ್ಣತಾ ಅಂಕವನ್ನು ಶೇ.35 ರಿಂದ ಶೇ.33 ಕ್ಕೆ ಇಳಿಕೆ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಎಂಬಂತೆ ಪಾಸ್‌ ಆಗುವ ಕನಿಷ್ಠ ಅಂಕವನ್ನು ಇಳಿಕೆ ಮಾಡಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು 600 ಕ್ಕೆ 198 ಅಂಕ ಪಡೆದರೆ ಪಾಸ್‌ ಆಗುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಪರೀಕ್ಷೆಯಲ್ಲಿ 30 ಅಂಕ ಪಡೆಯುವುದು ಕಡ್ಡಾಯ. 30 ಅಂಕ ಪಡೆದು 198 ಅಂಕ ಪಡೆದರೆ ಪಾಸ್‌ ಆಗಲಿದ್ದಾರೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ ಕನಿಷ್ಠ 206 ಅಂಕ ಗಳಿಸಿದರೆ ವಿದ್ಯಾರ್ಥಿಗಳು ಪಾಸ್‌ ಆಗಬಹುದು ಎಂದು ಸಚಿವರು ಹೇಳಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಸ್ತುತ 625 ಅಂಕಗಳಿಗೆ ಕನಿಷ್ಠ ಶೇ.35 ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಾಗಿತ್ತು. ಹೊಸ ನಿಯಮದ ಪ್ರಕಾರ 625 ಅಂಕಗಳಿಗೆ ಕನಿಷ್ಠ 206 ಅಂಕ (ಶೇ.33) ಗಳಿಸಿದರೆ ವಿದ್ಯಾರ್ಥಿಗಳು ತೇರ್ಗಡೆಯಗುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಗಳಿಸಲೇಬೇಕು.

ದ್ವಿತೀಯ ಪಿಯುಸಿ 600 ಅಂಕಗಳಿಗೆ ಕನಿಷ್ಠ ಶೇ.35 ರಷ್ಟು (210) ಪಡೆಯಬೇಕಿತ್ತು. ಹೊಸ ನಿಯಮದ ಪ್ರಕಾರ, 600 ಅಂಕಗಳಿಗೆ ಕನಿಷ್ಠ 198 ಅಂಕ (ಶೇ.33) ಪಡೆದರೆ ತೇರ್ಗಡೆಯಾಗುತ್ತಾ. ಪ್ರತಿ ವಿಷಯ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಬರುವುದು ಕಡ್ಡಾಯವಾಗಿದೆ.

Comments are closed.