Udupi: ಉಡುಪಿಯಲ್ಲಿ ಘೋರ ದುರಂತ: ಮೀನು ಹಿಡಿಯಲು ಹೋಗಿ ಮೂವರು ಜಲಸಮಾಧಿ

Share the Article

Udupi: ಉಡುಪಿಯಲ್ಲಿ ಮೀನು ಹಿಡಿಯಲು ಹೋಗಿ ಮೂವರು ಮಕ್ಕಳ ಜಲಸಮಾಧಿಯಾಗಿರುವ ಘಟನೆ ನಡೆದಿದೆ. ಸಮುದ್ರದಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ಮೂವರು ಮಕ್ಕಳು ನೀರು ಪಾಲಾದ ಘಟನೆ ಹೊಸಹಿತ್ಲು ಬೀಚ್‌ನಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಬೀಚ್‌ನಲ್ಲಿ ಸಂಕೇತ್‌ (16), ಸೂರಜ್‌ (15), ಆಶಿಶ್‌ (14) ನೀರು ಪಾಲಾದ ಮಕ್ಕಳು. ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮೃತರಲ್ಲಿ ಓರ್ವ ಪಿಯುಸಿ ವಿದ್ಯಾರ್ಥಿಯಾಗಿದ್ದು, ಮತ್ತಿಬ್ಬರು ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು.

ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Comments are closed.