Chennai: “ಮತ ಸಿಗುತ್ತೆ ಎಂದರೆ ಎಂಕೆ ಸ್ಟ್ಯಾಲಿನ್ ಉಚಿತವಾಗಿ ಪತ್ನಿಯರನ್ನು ಕೊಡ್ತಾರೆ..”ಎಐಡಿಎಂಕೆ ನಾಯಕನ ವಿವಾದಾತ್ಮಕ ಹೇಳಿಕೆ

Chennai: ಎಐಡಿಎಂಕೆ ಪಕ್ಷದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸಂಸದ ಸಿವಿ ಷಣ್ಮುಗಂ ಹೊಸ ವಿವಾದದ ಮಾತೊಂದನ್ನು ಹೇಳಿದ್ದಾರೆ. ಚುನಾವಣೆಯ ವೇಳೆ ಸಾಕಷ್ಟು ಘೋಷಣೆಗಳು ಹೊರ ಬರುತ್ತದೆ. ಮಿಕ್ಸರ್‌ಗಳು, ಗ್ರೈಂಡರ್, ಕುರಿ, ದನಗಳನ್ನು ಉಚಿತವಾಗಿ ನೀಡುತ್ತಾರೆ. ಅದಲ್ಲದೇ, ಯಾರಿಗೆ ಗೊತ್ತು ಅವರು ಪ್ರತಿ ವ್ಯಕ್ತಿಗೆ ಉಚಿತವಾಗಿ ಹೆಂಡ್ತಿಯನ್ನು ಕೂಡಾ ನೀಡಬಹುದು ಎಂದು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರುಣಾನಿಧಿಯವರ ಮಗನಾಗಿರುವುದರಿಂದ ಅಂತಹ ಭರವಸೆಗಳನ್ನು ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಡಿಎಂಕೆಯ ಎಕ್ಸ್ ಹ್ಯಾಂಡಲ್‌ನಲ್ಲಿನ ಪೋಸ್ಟ್‌ನಲ್ಲಿ ಸಚಿವೆ ತಿರುಮಿಗು ಗೀತಾ ಜೀವನ್, ಷಣ್ಮುಗಂ ಅವರನ್ನು “ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ ಮತ್ತು ಅವರ ಹೇಳಿಕೆಗಳು “ಎಐಎಡಿಎಂಕೆ ಮಹಿಳೆಯರ ಬಗ್ಗೆ ಹೊಂದಿರುವ ವಿಕೃತ ಮನೋಭಾವ ಮತ್ತು ದುರುದ್ದೇಶವನ್ನು” ಬಹಿರಂಗಪಡಿಸಿದೆ ಎಂದು ಹೇಳಿದರು.
Comments are closed.