Home News Cough Syrup: ಈ ಮೂರು ಕೆಮ್ಮಿನ ಸಿರಪ್‌ಗಳು ಬಹಳ ಅಪಾಯಕಾರಿ: ಭಾರತದಲ್ಲಿ ತಯಾರಿ, ಪೋಷಕರಿಗೆ WHO...

Cough Syrup: ಈ ಮೂರು ಕೆಮ್ಮಿನ ಸಿರಪ್‌ಗಳು ಬಹಳ ಅಪಾಯಕಾರಿ: ಭಾರತದಲ್ಲಿ ತಯಾರಿ, ಪೋಷಕರಿಗೆ WHO ವಾರ್ನಿಂಗ್‌

Cough syrup
Image source: masthmagaa

Hindu neighbor gifts plot of land

Hindu neighbour gifts land to Muslim journalist

Cough Syrup: ಭಾರತದಲ್ಲಿ ತಯಾರಾದ ಈ ಮೂರು ಕೆಮ್ಮಿನ ಸಿರಪ್‌ಗಳು ಬಹಳ ಅಪಾಯಕಾರಿ ಎಂದು WHO ಎಚ್ಚರಿಕೆ ನೀಡಿದೆ.

ಮಕ್ಕಳ ಸಾವಿಗೆ ಗುಣಮಟ್ಟ ನಿಯಂತ್ರಣ ವೈಫಲ್ಯಗಳ ಸರಣಿಯ ಇತ್ತೀಚಿನ ಬೆಳವಣಿಗೆಯಾಗಿದೆ. ಭಾರತದಲ್ಲಿ ತಯಾರಾದ ಕಲುಷಿತ ಕೆಮ್ಮಿನ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಎಚ್ಚರಿಕೆಯನ್ನು ನೀಡಿದೆ.
ಸ್ರೆಸನ್‌ ಫಾರ್ಮಸ್ಯುಟಿಕಲ್‌, ರೆಡ್ನೆಕ್ಸ್‌ ಫಾರ್ಮಾಸ್ಯುಟಿಕಲ್ಸ್‌ ಮತ್ತು ಶೇಪ್‌ ಫಾರ್ಮಾ ತಯಾರಿಸಿದ COLDRIF, Respifresh TR ಮತ್ತು ReLife ನ ನಿರ್ದಿಷ್ಟ ಬಾಚ್‌ಗಳಲ್ಲಿ ಕಲುಷಿತ ಉತ್ಪನ್ನಗಳು ಕಂಡು ಬಂದಿದೆ ಎಂದು WHO ಸೋಮವಾರ ತಡರಾತ್ರಿ ಅಧಿಸೂಚನೆಯಲ್ಲಿ ತಿಳಿಸಿದೆ.

ಕೆಮ್ಮು, ಜ್ವರ ಮತ್ತು ನೆಗಡಿ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಭಾರತದ ಆರೋಗ್ಯ ನಿಯಂತ್ರಕ, ಸೆಂಟ್ರಲ್‌ ಡ್ರಗ್ಸ್‌ ಸ್ಟ್ಯಾಂಡರ್ಡ್‌ ಕಂಟ್ರೋಲ್‌ ಆರ್ಗನೈಸೇಶನ್‌ ಈ ಮೂರು ಕೆಮ್ಮಿನ ಸಿರಪ್‌ಗಳಲ್ಲಿ ಡೈಥಿಲೀನ್‌ಗೆ ಗ್ಲೈಕೋಲ್‌ ಬಳಕೆಯಾಗಿರುವುದು ಕಂಡು ಬಂದಿದೆ. ಕಲುಷಿತ ಔಷಧಿಗಳನ್ನು ರಫ್ತು ಮಾಡಿಲ್ಲ, ಅಕ್ರಮ ವ್ಯಾಪಾರದ ಕುರಿತು ಯಾವುದೇ ಪುರಾವೆಗಳಿಲ್ಲ ಎಂದು ಭಾರತೀಯ ಔಷಧ ನಿಯಂತ್ರಕ ದೃಢಪಡಿಸಿದ್ದರೂ, ಜಾಗತಿಕ ಆರೋಗ್ಯ ಸಂಸ್ಥೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳನ್ನು ಪರಿಶೀಲನೆಯನ್ನು ತೀವ್ರಗೊಳಿಸಲು ಹೇಳಿದೆ. ಜೊತೆಗೆ ಈ ಉತ್ಪನ್ನಗಳು ನಮ್ಮ ದೇಶದಲ್ಲಿ ಪತ್ತೆಯಾದರೆ ತಕ್ಷಣವೇ ವರದಿ ಮಾಡಲು ಸೂಚನೆ ನೀಡಿದೆ.