KGF-3 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಟ ಯಶ್!!

Share the Article

KGF-3: ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಕೆಜಿಎಫ್ ನಿರ್ಮಿಸಿದ ದಾಖಲೆಯನ್ನು ಎಂದೂ ಮರೆಯುವಂತಿಲ್ಲ. ಸೊರಗಿ ಹೋಗುತ್ತಿದ್ದ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಈಗಾಗಲೇ ಕೆಜಿಎಫ್ ಹಾಗೂ ಕೆಜಿಎಫ್ 2 ಚಿತ್ರಗಳು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. ಇದರ ಬೆನ್ನಲ್ಲೇ ಹಲವು ಕನ್ನಡಿಗರ ಪ್ರಶ್ನೆ ಏನೆಂದರೆ ಕೆಜಿಎಫ್ 3 ಬರುತ್ತದೆಯೇ ಎಂಬುದು. ಪ್ರತಿದಿನವೂ ಕೂಡ ಈ ಪ್ರಶ್ನೆ ಕನ್ನಡಿಗರ ಮನದಲ್ಲಿ ಕಾಡುತ್ತಲೇ ಇದೆ. ಇದೀಗ ಈ ಕುರಿತಂತೆ ನಟ ಯಶ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

ಹೌದು, ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್‌ಗೆ ಹೋದಲ್ಲಿ ಬಂದಲ್ಲಿ ಕೇಳೋದು ಒಂದೇ ಪ್ರಶ್ನೆ! ಅದು ಬೇರೇನೂ ಅಲ್ಲ, ನಿಮ್ಮ ‘ಕೆಜಿಎಫ್ 3’ ಯಾವಾಗ ಬರುತ್ತೆ ಅನ್ನೋದು. ಇದೀಗ ಬಾಲಿವುಡ್ ಸಂದರ್ಶನದಲ್ಲಿ ನಟ ಯಶ್ ಅವರು ಈ ಬಗ್ಗೆ ಮಾತನ್ನಾಡಿದ್ದಾರೆ.

ಖಂಡಿತವಾಗಿಯೂ ಕೆಜಿಎಫ್ 3 ಸಿನಿಮಾ ಆಗುತ್ತೆ.. ಆದ್ರೆ ಈಗ ಅಲ್ಲ. ಯಾಕಂದ್ರೆ ಸದ್ಯಕ್ಕೆ ನಾನು ಬೇರೆ ಎರಡು ಪ್ರಾಜೆಕ್ಟ್‌ಗಳಲ್ಲಿ ಫುಲ್ ಬ್ಯುಸಿ ಇದೀನಿ. ಅಷ್ಟೇ ಅಲ್ಲ, ಕೆಜಿಎಫ್ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ಬೇರೆಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ, ನಾವಿಬ್ಬರೂ ಕಾಲ್ ಮಾಡಿ ಮಾತನಾಡುವಾಗ ಈ ಕೆಜಿಎಫ್ 3 ಮಾಡುವ ಬಗ್ಗೆ ಮಾತನ್ನಾಡುತ್ತಿದ್ದೇವೆ. ಇಬ್ಬರಿಗೂ ಕೆಜಿಎಫ್ ಸಿನಿಮಾ ಮಾಡುವ ಬಗ್ಗೆ ತುಂಬಾ ಆಸಕ್ತಿ ಇದೆ. ಆದರೆ, ಇಬ್ಬರೂ ಆ ಬಗ್ಗೆ ಸಂಪೂರ್ಣ ಗಮನ ಕೊಡಬೇಕಿದೆ. ಆದ್ದರಿಂದ ಸದ್‌ಉ ನಮ್ಮನಮ್ಮ ಕೈನಲ್ಲಿರುವ ಬೇರೆ ಸಿನಿಮಾಗಳು ಮುಗಿದ ಮೇಲಷ್ಟೇ ಆ ಸಿನಿಮಾ ಶುರುವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ:Adhar Card: ಆಧಾರ್ ಕಾರ್ಡ್ ಕಳೆದು ಹೋದ್ರೆ ಡೋಂಟ್ ವರಿ – ಜಸ್ಟ್ ಈ ನಂಬರಿಗೆ ಕಾಲ್ ಕೊಡಿ, ಕ್ಷಣದಲ್ಲಿ ಪಡೆಯಿರಿ

Comments are closed.