Home News Alcohol: ಕರ್ನಾಟಕದಲ್ಲಿ ಮದ್ಯ ಮಾರಾಟ ಸಂಪೂರ್ಣ ಕುಸಿತ – ಹೀಗಿದೆ ನೋಡಿ ಕಾರಣ

Alcohol: ಕರ್ನಾಟಕದಲ್ಲಿ ಮದ್ಯ ಮಾರಾಟ ಸಂಪೂರ್ಣ ಕುಸಿತ – ಹೀಗಿದೆ ನೋಡಿ ಕಾರಣ

Hindu neighbor gifts plot of land

Hindu neighbour gifts land to Muslim journalist

Alcohol: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೂರ್ನಾಲ್ಕು ಬಾರಿ ಮದ್ಯದ ದರವನ್ನು ಏರಿಕೆ ಮಾಡಿತ್ತು. ಇದರ ಪರಿಣಾಮವಾಗಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಕರ್ನಾಟಕದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ಕುಸಿತ ಕಂಡಿದೆ.

ಹೌದು, ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಡೇಟಾ ಪ್ರಕಾರ, ರಾಜ್ಯದಲ್ಲಿ ಮದ್ಯ ಮಾರಾಟ ಚೇತರಿಕೆ ಕಂಡಿಲ್ಲ. 2023, 2024ಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.

2023ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 352.83 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದರೆ, 2024ರ ಅದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್​ಗೆ ಇಳಿಕೆಯಾಗಿತ್ತು. 2025 ರಲ್ಲಿ 342.93 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದರೆ 2.83 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆಯಾಗಿದೆ. ಈ ಬಗ್ಗೆ ಮದ್ಯ ಮಾರಾಟಗಾರರು ಪ್ರತಿಕ್ರಿಯಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ 15 ರಿಂದ 20 ರಷ್ಟು ಮದ್ಯ ಮಾರಾಟ ಕಡಿಮೆ ಆಗಿದೆ. ಕಳೆದ ಸಾಲಿಗೆ ಹೋಲಿಸಿದರೆ 47.46 ಲಕ್ಷ ಬಾಕ್ಸ್ ವ್ಯಾಪಾರ ಇಳಿಕೆ ಆಗಿದ್ದು, ಶೇ 19.55ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ:Madikeri: ಗೋವುಗಳ ಅಕ್ರಮ ಸಾಗಾಟ, ಗೂಡ್ಸ್‌ ವಾಹನ ಪಲ್ಟಿ

ಇನ್ನೂ ಪ್ರತಿ ತಿಂಗಳಿನಲ್ಲೂ ಬಿಯರ್ ಮಾರಾಟದಲ್ಲಿ ಕಡಿಮೆ ಆಗುತ್ತಲೇ ಇದೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಾಡಿದ ಬಿಯರ್ ಪ್ರಿಯರು, ಬಿಯರ್ ಮೇಲೆ ದರ ಏರಿಕೆ ಮಾಡಿರುವುದರಿಂದ ಮೂರು ಬಿಯರ್ ಕುಡಿಯುತ್ತಿದ ನಾವು, ನಮ್ಮ ಸ್ನೇಹಿತರು ಇದೀಗ ಒಂದು ಬಿಯರ್ ಕುಡಿಯುವಂತೆ ಆಗಿದೆ.