H D Revanna: ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಹೆಚ್‌.ಡಿ.ರೇವಣ್ಣ ಕಾರು ತಡೆದ ಕಂದಾಯ ಇಲಾಖೆ ಅಧಿಕಾರಿಗಳು

Share the Article

Hasana: ಹಾಸನಾಂಬೆ ದೇವಿ ದರ್ಶನಕ್ಕೆ ನಾಲ್ಕನೇ ದಿನವಾದ ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ರಾಜಕೀಯ ನಾಯಕರು, ಅಧಿಕಾರಿಗಳು ಕೂಡಾ ಹಾಸನಾಂಬೆ ದರ್ಶನ್‌ ಪಡೆದು ವಿಶೇಷ ಪೂಜೆ ಮಾಡುತ್ತಾರೆ. ಮಾಜಿ ಸಚಿವ, ಶಾಸಕ ಹೆಚ್‌ ಡಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಕೂಡಾ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಕಾರಿನಲ್ಲಿ ಆಗಮಿಸಿದ ರೇವಣ್ಣ ಅವರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಶಿಷ್ಟಾಚಾರ ಪಾಲನೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಹೆಚ್‌ ಡಿ ರೇವಣ್ಣ ಹಾಸನಾಂಬೆ ದರ್ಶನಕ್ಕೆ ತಮ್ಮದೇ ಕಾರಿನಲ್ಲಿ ತಮ್ಮ ಭದ್ರತಾ ವ್ಯವಸ್ಥೆಗಳೊಂದಿಗೆ ಬಂದಿದ್ದು, ಈ ವೇಳೆ ಕಂದಾಯ ಇಲಾಖೆ ಅಧಿಕಾರಿಗಳು ಶಾಸಕರ ಕಾರನ್ನು ತಡೆದಿದ್ದಾರೆ.

ಇದನ್ನೂ ಓದಿ;Karoor Stampede: ‘ಕರೂರ್‌ ಕಾಲ್ತುಳಿತ ದುರಂತʼ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಸುಪ್ರೀಂಕೋರ್ಟ್‌ ಆದೇಶ

ಕಾರನ್ನು ತಡೆದಿದ್ದಕ್ಕೆ ಶಾಸಕರು ಗರಂ ಆಗಿದ್ದು, ನಂತರ ಕಾರಿನಿಂದ ಇಳಿದ ರೇವಣ್ಣ ನಡೆದುಕೊಂಡೇ ದೇವಾಲಯಕ್ಕೆ ತೆರಳಿದರು. ಹೆಚ್‌ ಡಿ ರೇವಣ್ಣ ಹಾಗೂ ಪತ್ನಿ ಭವಾನಿಗೆ ದೇವರ ದರ್ಶನವು ನೇರ ಎಂಟ್ರಿ ಮೂಲಕ ನೀಡಲಾಯಿತು.

Comments are closed.