Reels: ರೀಲ್ಸ್ ಮಾಡುವವರಿಗೆ ‘ಮೆಟಾ’ ದಿಂದ ಕೈತುಂಬಾ ಹಣವೋ ಹಣ!

Share the Article

Reels: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿಯಾದ ಮೆಟಾ, ರಚನೆಕಾರರ ವೀಡಿಯೊಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಮೂಲಕ ಫಲೋವರ್ ಮತ್ತು ಗಳಿಕೆಯನ್ನು ದ್ವಿಗುಣಗೊಳಿಸುತ್ತದೆ. ಈ AI ಉಪಕರಣವು ನಿಮ್ಮ ಧ್ವನಿಯ ಸ್ವರವನ್ನು ಸಂರಕ್ಷಿಸುತ್ತದೆ, ಅನುವಾದಿತ ರೀಲ್ ನಿಮ್ಮ ಮೂಲ ಧ್ವನಿಯಂತೆಯೇ ಕೇಳಿಸುತ್ತದೆ. ಅಲ್ಲದೇ ಇದರಲ್ಲಿ ಲಿಪ್-ಸಿಂಕ್ ನಿಖರತೆಯಿದೆ. ತುಟಿಗಳ ಚಲನೆಯು ಅನುವಾದಿತ ಆಡಿಯೊಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ, ಇದು ಸಹಜವಾಗಿ ಕಾಣುತ್ತದೆ. ಕಾರ್ಯಕ್ಷಮತೆ ಟ್ರ್ಯಾಕಿಂಗ್ ಗೂ ಸೈ. ರಚನೆಕಾರರು ತಮ್ಮ ರೀಲ್‌ಗಳು ಯಾವ ಭಾಷೆಯಲ್ಲಿ ಜನಪ್ರಿಯವಾಗಿವೆ ಎಂಬುದನ್ನು ವೀಕ್ಷಣೆ ಸಂಖ್ಯೆಯ ಮೂಲಕ ತಿಳಿಯಬಹುದು.

ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಒಂದು ವೀಡಿಯೊದಲ್ಲಿ ಈ ವೈಶಿಷ್ಟ್ಯವನ್ನು ಪ್ರದರ್ಶಿಸಿದ್ದಾರೆ. ನೀವು ಆಸಕ್ತಿಯಿರುವ ವೀಡಿಯೊ ಭಾಷೆಯ ತೊಡಕಿನಿಂದ ನಿಮ್ಮನ್ನು ತಡೆಯಬೇಕಿಲ್ಲ ಎಂದು ಅವರು ಹೇಳಿದ್ದಾರೆ. ಹಿಂದಿ, ಸ್ಪ್ಯಾನಿಷ್, ಮತ್ತು ಪೋರ್ಚುಗೀಸ್‌ನಂತಹ ಭಾಷೆಗಳಲ್ಲಿ ಈ ವೈಶಿಷ್ಟ್ಯವು ಈಗ ಲಭ್ಯವಿದೆ, ಇದು ಭಾರತೀಯ ರಚನೆಕಾರರಿಗೆ ದೊಡ್ಡ ಅವಕಾಶವಾಗಿದೆ.

ಯಾರಿಗೆ ಲಭ್ಯ?

ಇನ್‌ಸ್ಟಾಗ್ರಾಮ್‌ ಎಲ್ಲಾ ಸಾರ್ವಜನಿಕ ಖಾತೆಗಳಿಗೆ.

ಫೇಸ್‌ಬುಕ್‌ನಲ್ಲಿ 1,000ಕ್ಕಿಂತ ಹೆಚ್ಚು ಫಾಲೋವರ್ಸ್ ಇರುವವರಿಗೆ.

ಕ್ರಿಯೆಟರ್‌ಗಳು ಈ ವೈಶಿಷ್ಟ್ಯವನ್ನು ಆನ್/ಆಫ್ ಮಾಡಬಹುದು ಮತ್ತು ಅನುವಾದಿತ ರೀಲ್‌ಗಳನ್ನು ಪರಿಶೀಲಿಸಿ ಅಥವಾ ಅಳಿಸಬಹುದು.

ಇದನ್ನು ಹೇಗೆ ಬಳಸುವುದು?

ರೀಲ್ ಪೋಸ್ಟ್ ಮಾಡುವಾಗ, ‘ಮೆಟಾ AI ನೊಂದಿಗೆ ನಿಮ್ಮ ಧ್ವನಿಯನ್ನು ಅನುವಾದಿಸಿ’ ಆಯ್ಕೆಯನ್ನು ಆರಿಸಿ. ಲಿಪ್-ಸಿಂಕ್ ಸಕ್ರಿಯಗೊಳಿಸಲು ಆಯ್ಕೆ ಇರುತ್ತದೆ.

ಇದನ್ನೂ ಓದಿ:Viral Video : ಹೊರಗಿದ್ದಾಗ ಯಾರ ಜೊತೆ ಬೆಡ್ ಹತ್ತಬೇಕು, ಹತ್ತಬಾರ್ದು ಅಂತ ಯೋಚಿಸಿದ್ರೆ ಈ ಸ್ಥಿತಿ ಬರ್ತಿರ್ಲಿಲ್ಲ – ದರ್ಶನ್ ಕುರಿತು ಯುವತಿ ಹೇಳಿಕೆ ವೈರಲ್

ವೀಕ್ಷಕರಿಗೆ: ರೀಲ್ ವೀಕ್ಷಿಸುವಾಗ, ಮೂರು-ಡಾಟ್ ಮೆನುಗೆ ಹೋಗಿ, ಆಡಿಯೋ ಮತ್ತು ಭಾಷಾ ಸೆಟ್ಟಿಂಗ್‌ಗಳಲ್ಲಿ ಇಷ್ಟದ ಭಾಷೆಯನ್ನು ಆಯ್ಕೆಮಾಡಿ. ‘ಅನುವಾದಿಸಬೇಡಿ’ ಆಯ್ಕೆಯೂ ಲಭ್ಯ.

Comments are closed.