Bengaluru : ಗಣವೇಶಧಾರಿ ಮುನಿರತ್ನರನ್ನ ‘ಏ.. ಕರಿ ಟೋಪಿ MLA ಬಾರಯ್ಯ’ ಎಂದ ಡಿಕೆಶಿ – ಪ್ರತಿಭಟನೆಗೆ ಕುಳಿತ ಮುನಿರತ್ನ

Share the Article

Bengaluru : ಡಿಸಿಎಂ ಡಿಕೆ ಶಿವಕುಮಾರ್ ಅವರ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ಆರ್.ಆರ್.ನಗರದ ಬಿಜೆಪಿ ಶಾಸಕ ಮುನಿರತ್ನ ಹೈಡ್ರಾಮಾ ಸೃಷ್ಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮುನಿರತ್ನ ಅವರು ಗಣವೇಷಧಾರಿಯಾಗಿ ಆಗಮಿಸಿದ್ದರು. ಸ್ಥಳೀಯ ಶಾಸಕನಾಗಿ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದಿದೆ. ನನ್ನನ್ನು ಒದೆಯಲಾಗಿದೆ. ನನ್ನ ಮೇಲೆ ಹಲ್ಲೆಯಾಗಿದೆ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ಬೆಂಗಳೂರಿನ ಜೆಪಿ ಟೆಕ್ ಪಾರ್ಕ್ ನಲ್ಲಿ ಆರ್ ಎಸ್ ಎಸ್ ನ ಪಥ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದರು. ಈ ವೇಳೆ ವೇದಿಕೆಯ ಕೆಳಕ್ಕೆ ಆರ್ ಎಸ್ ಎಸ್ ಉಡುಪು ಧರಿಸಿದ್ದ ಶಾಸಕ ಮುನಿರತ್ನರನ್ನು ಡಿಕೆ ಶಿವಕುಮಾರ್ ಅವರು ಏ ಕರಿ ಟೋಪಿ ಎಂಎಲ್ಎ ಮಾರಯ್ಯ ಮೇಲೆ ಎಂದು ಕರೆದಿದ್ದಾರೆ.

ಡಿಕೆ ಕರೀತಿಂದಂತೆ ವೇದಿಕೆಗೆ ಬಂದ ಮುನಿರತ್ನ ಮೈಕ್ ಕೊಡಿ ಕೊಡಿ ಕೇಳಿದ್ದಾರೆ. ಆದರೆ ಇದಕ್ಕೆ ಈಗ ಆಗಲ್ಲ ಆಮೇಲೆ ಕೊಡ್ತೀನಿ ಹೋಗಿ ಕೂತುಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಾದ ಮುನಿರತ್ನ ಡಿಕೆಶಿ ಕೈಯಿಂದ ಮೈಕ್ ಕಿತ್ತುಕೊಂಡು ಶಾಸಕರಿಗೆ, ಸಂಸದರಿಗೆ ಆಹ್ವಾನ ನೀಡಿಲ್ಲ.. ಇದು ಕಾಂಗ್ರೆಸ್ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮ ಎಂದು ಜೋರಾಗಿ ಹೇಳಿದ್ದಾರೆ. ಈ ವೇಳೆ ಡಿಕೆ ಮೈಕ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ.

ಅಲ್ಲದೆ ಮೇಲೆ ಬರುತ್ತಿದ್ದಂತೆ ಮಾತನಾಡಿದ ಶಾಸಕ ಮುನಿರತ್ನ, ಇದು ಸಾರ್ವಜನಿಕ ಕಾರ್ಯಕ್ರಮವಾಗಿದ್ದರೂ ಸ್ಥಳೀಯ ಶಾಸಕನಾಗಿರುವ ನನಗೆ ಆಹ್ವಾನ ನೀಡಿಲ್ಲ. ಈ ಭಾಗದ ಸಂಸದ ಮಂಜುನಾಥ್ ಅವರಿಗೂ ಆಹ್ವಾನ ನೀಡಿಲ್ಲ. ಈ ಮೂಲಕ ನಮ್ಮನ್ನು ಅವಮಾನಗೊಳಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಮುಂದೆ ಬೇಸರ ಹೊರ ಹಾಕಿದರು. ಇದಾದ ನಂತರ ವೇದಿಕೆ ಮೇಲೆಯೇ ಮುನಿರತ್ನ ಧರಣಿಗೆ ಕುಳಿತರು.

ಇದನ್ನೂ ಓದಿ:Belthangady: ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆಯೇ ಉಪಹಾರ ಖಾಲಿ, ಜನರಿಗೆ ನಿರಾಸೆ: ಉಪಾಹಾರ, ಊಟದ ಸಮಯವೆಷ್ಟು? ಕೂಪನ್‌ ಸಂಖ್ಯೆ ಎಷ್ಟು? ಇಲ್ಲಿದೆ ವಿವರ

ಇದು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ಅವಮಾನ ಮಾಡಲಾಗಿದೆ. ನನಗೆ 15 ವರ್ಷದ ಮೊಮ್ಮಗನಿದ್ದಾನೆ. ಈ ವಯಸ್ಸಿನಲ್ಲಿ ನನ್ನ ಮೇಲೆ ರೇ*ಪ್ ಕೇಸ್ ಹಾಕಿದರು. ಏಯ್ ಕರಿ ಟೋಪಿ, ಬಾರಯ್ಯ ಎಂದು ನನ್ನನ್ನು ಕರೆದು ಅವಮಾನಿಸಿದ್ದಾರೆ. ಆರ್‌ ಆರ್ ನಗರದಲ್ಲಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದರು.

Comments are closed.