Mangalore: ಕಣಜದ ಹುಳಗಳ ದಾಳಿ, ವಿದ್ಯಾರ್ಥಿನಿ ಸಾವು

Mangalore: ಕಣಜದ ಹುಳಗಳ ದಾಳಿಯಿಂದ ವಿದ್ಯಾರ್ಥಿನಿ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಡ್ನೂರು ಗ್ರಾಮದ ಸೇಡಿಯಾಪು ಬಳಿ ನಡೆದಿದೆ.

ಶಾಲೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ವಿದ್ಯಾರ್ಥಿಗಳಿಬ್ಬರ ಮೇಲೆ ಕಣಜದ ಹುಳಗಳ ಹಿಂಡು ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ದಿಶಾ (7) ಮೃತಪಟ್ಟಿದ್ದಾಳೆ.
ಸೇಡಿಯಾಪು ಕೂಟೇಲು ಗ್ರಾಮದ ಕಿರಣ್ ಅವರ ಪುತ್ರಿ ದಿಶಾ ಶುಕ್ರವಾರ ಸಂಜೆ ಕಣಜದ ಹುಳಗಳ ದಾಳಿಯಿಂದ ಗಂಭೀರಾಗಿ ಗಾಯಗೊಂಡಿದ್ದು, ಶನಿವಾರ ಮಧ್ಯಾಹ್ನ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ:Mangalore: Muslim ಕ್ಯಾಬ್ ಚಾಲಕನಿಗೆ ʼಭಯೋತ್ಪಾದಕʼ ಎಂದು ಕರೆದ ಕೇರಳ ನಟನ ಬಂಧನ
ಅಸ್ವಸ್ಥಗೊಂಡ ಇನ್ನೋರ್ವ ವಿದ್ಯಾರ್ಥಿ ಪ್ರತ್ಯೂಶ್ (10) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಕ್ಕಳ ರಕ್ಷಣೆಗೆಂದು ಬಂದ ನಾರಾಯಣ ಎಂಬುವವರ ಮೇಲೆಯೂ ಕಣಜದ ಹುಳಗಳ ಹಿಂಡು ದಾಳಿ ಮಾಡಿದ್ದು, ಅವರು ಚೇತರಿಸಿದ್ದಾರೆ ಎಂದು ವರದಿಯಾಗಿದೆ.
Comments are closed.