IPL-2026 : RCB ಸಂಭಾವನೀಯ ಆಟಗಾರರ ಪಟ್ಟಿ ರಿಲೀಸ್ – ಕೆಲವರಿಗೆ ಕೋಕ್

Share the Article

IPL-2026: 2025ರ ಐಪಿಎಲ್ ನಲ್ಲಿ ಗೆದ್ದು ಬೀಗದ ಆರ್‌ಸಿಬಿ ತಂಡ ಇದೀಗ 2026ರ ಐಪಿಎಲ್ ಗೆ ಸಜ್ಜಾಗಿ ನಿಂತಿದೆ. ಈ ಬಾರಿ ತಂಡದಲ್ಲಿ ಯಾವೆಲ್ಲಾ ಆಟಗಾರರು ಇರಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ. ಇದರ ನಡುವೆ ಮೊದಲಿದ್ದ ತಂಡದಿಂದ ಕೆಲವು ಆಟಗಾರರನ್ನು ಕೈ ಬಿಡಲಾಗುತ್ತದೆ ಎಂಬ ಸುದ್ದಿ ಕೂಡ ಮುನ್ನಡೆಗೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ಸಂಭಾವನೆಯ ಆಟಗಾರರ ಪಟ್ಟಿಯೊಂದು ರಿಲೀಸ್ ಆಗಿದೆ. ಅದರಂತೆ ಆರ್​ಸಿಬಿ ಫ್ರಾಂಚೈಸಿ ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡುವ ಆಟಗಾರರು ಯಾರೆಂದು ನೋಡುವುದಾದರೆ ಇಲ್ಲಿದೆ ನೋಡಿ ಲಿಸ್ಟ್

ಲಿಯಾಮ್ ಲಿವಿಂಗ್​ಸ್ಟೋನ್, ರಾಸಿಖ್ ಸಲಾಂ ದಾರ್, ಅಭಿನಂದನ್ ಸಿಂಗ್, ಮೋಹಿತ್ ರಾಥಿ, ಬ್ಲೆಸಿಂಗ್ ಮುಝರಬಾನಿ, ಟಿಮ್ ಸೈಫರ್ಟ್ ಈ 6 ಆಟಗಾರರನ್ನು ಕೈ ಬಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಉಳಿದೆಲ್ಲಾ ಆಟಗಾರರು ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಹೀಗಾಗಿ ಚಾಂಪಿಯನ್ ಪಡೆಯನ್ನು ಮುಂದಿನ ಸೀಸನ್​ಗೂ ಮುಂದುವರೆಸುವ ಸಾಧ್ಯತೆಯಿದೆ.

ಇದನ್ನೂ ಓದಿ;IPL-2026 ಹರಾಜಿಗೆ ಡೇಟ್ ಫಿಕ್ಸ್ !!

Comments are closed.