Mangalore: ಜನತಾ ಡಿಲಕ್ಸ್ ಪತ್ತುಮುಡಿ ಸೌದ ಹೋಟೆಲ್ ಮಾಲಕ ಉದ್ಯಮಿ ಪತ್ತುಮುಡಿ ಸೂರ್ಯನಾರಾಯಣ ರಾವ್ ನಿಧನ

Mangalore: ಮಂಗಳೂರಿನ ಜನತಾ ಡಿಲಕ್ಸ್ ಹೋಟೆಲ್ ಪತ್ತುಮುಡಿ ಸೌದ ಮಾಲಕ ಉದ್ಯಮಿ ಬಂಟ್ವಾಳ ಮಂಚಿಯ ಪತ್ತುಮುಡಿಯವರಾದ ಪತ್ತುಮುಡಿ ಸೂರ್ಯನಾರಾಯಣ ರಾವ್ (73) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ಅ.10) ನಿಧನ ಹೊಂದಿದ್ದಾರೆ.

ಕುಂದಾಫುರ ಹಾಗೂ ಉಡುಪಿಯಲ್ಲಿ ಹೋಟೆಲ್ ಉದ್ಯಮ ಪ್ರಾರಂಭ ಮಾಡಿ ನಂತರ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿ ಜನತಾ ಡಿಲಕ್ಸ್ ಹೋಟೆಲ್ ಆರಂಭ ಮಾಡಿದ್ದರು. ನಂತರ ಅವರು ಎಂಜಿ ರಸ್ತೆಯಲ್ಲಿ ಪತ್ತುಮುಡಿ ಸೌಧವನ್ನು ಸ್ಥಾಪನೆ ಮಾಡಿ ಅದರಲ್ಲಿ ವೆಜ್ ರೆಸ್ಟೋರೆಂಟ್ ಜೊತೆಗೆ ಸಭಾಂಗಣವನ್ನು ಮಾಡಿದರು. ಇವರು ಹೋಟೆಲ್, ಕ್ಯಾಟರಿಂಗ್ ಉದ್ಯಮದಲ್ಲಿ ತಮ್ಮನ್ನು ತಾವು ಕಳೆದ 3 ದಶಕದಿಂದ ತೊಡಗಿಸಿಕೊಂಡಿದ್ದರು.
Comments are closed.