Home News Bigg Boss: ಎಲ್ಲರ ಫೆವರೇಟ್ ಶೋ ‘ಬಿಗ್ ಬಾಸ್’ ಹುಟ್ಟಿಕೊಂಡಿದ್ದು ಹೇಗೆ?

Bigg Boss: ಎಲ್ಲರ ಫೆವರೇಟ್ ಶೋ ‘ಬಿಗ್ ಬಾಸ್’ ಹುಟ್ಟಿಕೊಂಡಿದ್ದು ಹೇಗೆ?

Hindu neighbor gifts plot of land

Hindu neighbour gifts land to Muslim journalist

Bigg Boss : ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಆವೃತ್ತಿ ಎಂದಿನಂತೆ ಮತ್ತೆ ಶುರುವಾಗಿದೆ. ಎರಡು ದಿನ ಪೂರ್ತಿಯಾಗಿ ಖಾಲಿಯಾಗಿದ್ದ ಮನೆ ಈಗ ಸ್ಪರ್ಧಿಗಳಿಂದ ತುಂಬಿ ತುಳುಕುತ್ತಿದೆ. ಇದರ ಬೆನ್ನಲ್ಲೇ ಜನರಲ್ಲಿ ಈ ಬಿಗ್ ಬಾಸ್ ಎಂಬುದು ಎಲ್ಲಿ ಆರಂಭವಾಯಿತು? ಯಾವಾಗ ಹುಟ್ಟಿಕೊಂಡಿತು? ಹೇಗೆ ಬೆಳೆಯಿತು? ಇದು ಕನ್ನಡಕ್ಕೆ ಕಾಲಿಟ್ಟಿದ್ದು ಹೇಗೆ? ಎಂಬ ಹಲವಾರು ಪ್ರಶ್ನೆಗಳು ಹುಟ್ಟುಕೊಂಡಿವೆ.

ಬಿಗ್ ಬಾಸ್ ಹುಟ್ಟಿಕೊಂಡಿದ್ದೆ ಒಂದು ರೋಚಕ ವಿಚಾರ. ಅಷ್ಟಕ್ಕೂ ಬಿಗ್ ಬ್ರದರ್ ಅನ್ನೋದು ಡಿಕ್ಟೇಟರ್, ಸರ್ವಾಧಿಕಾರಿ ಅನ್ನೋ ಪದಕ್ಕೆ ಇನ್ನೊಂದು ರೂಪ.. 1984 ಪುಸ್ತಕದಲ್ಲಿ, ಸರ್ವಾಧಿಕಾರಿ ‘ಬಿಗ್ ಬ್ರದರ್ ನಿನ್ನನ್ನು ನೋಡ್ತಿದ್ದಾನೆ’ ಅಂತ ಟೆಲಿಸ್ಕ್ರೀನ್ ಮೂಲಕ ಜನರನ್ನ ಮಾನಿಟರ್ ಮಾಡ್ತಿದ್ದ.. ಡಿ ಮೋಲ್, ಆರ್ವೆಲ್ನ ಸರ್ವೆಲೆನ್ಸ್ ರಾಜ್ಯಕ್ಕೂ, ಸ್ಪರ್ಧಿಗಳು ಸದಾ ಕಣ್ಗಾವಲಿನಲ್ಲಿ ಇರೋ ರಿಯಾಲಿಟಿ ಶೋಗೂ ಇರೋ ಸಾಮ್ಯತೆ ಎಷ್ಟಿದೆ ಅಂತ ಗುರುತಿಸಲಾಯಿತು. ಈ ಮೂಲಕವೇ ಪುಸ್ತಕದಲ್ಲಿದ್ದ ವಿಚಿತ್ರ, ವಿನೂತನ ಐಡಿಯಾ ಟಿವಿ ಸ್ಕ್ರೀನ್ನಲ್ಲಿ ಹೊಸ ಕಾರ್ಯಕ್ರಮವಾಗಿ ಬದಲಾಯ್ತು. ಬಿಗ್ ಬಾಸ್ ಅನ್ನೋದು ಬಹುತೇಕ ಜನರ ಪಾಲಿಗೆ ಒಂದು ರಿಯಾಲಿಟಿ ಷೋ.. ಆದ್ರೆ ಇನ್ನೂ ಕೆಲವರ ದೃಷ್ಟಿಲಿ ಅದೊಂದು ಕ್ರಾಂತಿಕಾರಿ ಕಾರ್ಯಕ್ರಮ.