Eshwar Khandre : ಬಿಗ್ ಬಾಸ್ ವಿರುದ್ಧ ಕಠಿಣ ಕ್ರಮ ಯಾಕೆ? ಹೊಸ ರೀಸನ್ ಬಿಚ್ಚಿಟ್ಟ ಖಂಡ್ರೆ

Share the Article

Eshwar Khandre : ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಬಿಗ್‌ ಬಾಸ್‌ ಕನ್ನಡ ಸೀಸನ್‌ -12 (Bigg Boss Kannada 12) ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ತೆರವಿಗೆ ಆದೇಶ ನೀಡಲಾಗಿದೆ. ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಅವರು ಬಿಗ್ ಬಾಸ್ ವಿರುದ್ಧ ಯಾಕೆ ಕಠಿಣ ಕ್ರಮ ಕೈಗೊಂಡೆವು ಎಂದು ಹೊಸ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಗೂ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ. ನಿಯಮದ ಪ್ರಕಾರ ಸಿಎಫ್‌ಇ, ಸಿಎಫ್‌ಓ ಪಡೆಯಬೇಕಾಗಿತ್ತು. ಈ ಬಗ್ಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಅವರು ಕೇರ್ ಮಾಡಿರಲಿಲ್ಲ. ಹೀಗಾಗಿ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ನಿಯಮದ ಪ್ರಕಾರ ಸಿಎಫ್‌ಇ, ಸಿಎಫ್‌ಓ ಪಡೆಯಬೇಕಾಗಿತ್ತು. ಈ ಬಗ್ಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಅವರು ಕೇರ್ ಮಾಡಿರಲಿಲ್ಲ. ಹೀಗಾಗಿ ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು. ಇದರಲ್ಲಿ ಬೇರೆ ಯಾವುದೇ ಅನ್ಯ ಉದ್ದೇಶ ಇಲ್ಲ. ಬಿಸ್ ಬಾಸ್ ಕಾರ್ಯಕ್ರಮ ಆಯೋಜನೆ ಮಾಡುವವರು ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದಾರೆ. ಅದರ ತೀರ್ಪು ಬಂದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮಾಲೀಕರು ಅರ್ಜಿಯನ್ನಾದರೂ ಹಾಕಿದ್ದಾರಾ ಕೇಳಿ, ಅನುಮತಿ ಪಡೆದು ನಡೆಸಲಿ ಯಾರು ಬೇಡ ಅಂತಾರೆ? ನಟ್ಟು ಬೋಲ್ಟು ಟೀಕೆಗೂ ಇದಕ್ಕೂ ಸಂಬಂಧ ಇಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಮಾತಿಗೆ ತಳುಕು ಹಾಕುವ ಅವಶ್ಯಕತೆ ಇಲ್ಲ. ಇದರಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Comments are closed.