Kantara-1: ಸಿನಿಮಾ ನೋಡಿ ಹುಚ್ಚಾಟ ಆಡುವವರಿಗೆ ಕಾಂತಾರ ತಂಡದಿಂದ ಖಡಕ್ ಎಚ್ಚರಿಕೆ

Kantara-1 : ಕಾಂತರಾ ಚಾಪ್ಟರ್ 1 ವಿಶ್ವದಾದ್ಯಂತ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಕೆಲವು ವೀಕ್ಷಕರು ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾರೆ.

ದೈವದ ವೇಷ, ಹಾಕೋದು ದೈವ ಆವಾಹನೆಯಾದಂತೆ ನಟಿಸೋ ಹುಚ್ಚು ಪ್ರೇಕ್ಷಕರು ಕಾಂತಾರಾ ಚಿತ್ರ ತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾರೆ. ಈ ರೀತಿ ಮಾಡಿದರೆ ಅದು ದೈವಗಳಿಗೆ ಅವಮಾನ ಮಾಡಿದಂತೆ. ಹೀಗೆ ಹುಚ್ಚಾಟ ಆಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಿನಿಮಾ ತಂಡ ಎಚ್ಚರಿಕೆ ನೀಡಿದೆ.
ಹೌದು, ದೈವದ ವೇಷಗಳನ್ನ ತೊಟ್ಟು ಚಿತ್ರಮಂದಿರಕ್ಕೆ ಬರೋದು. ಅಲ್ಲಿ ಹುಚ್ಚು ಹುಚ್ಚಾಗಿ ನರ್ತಿಸೋದು.. ಇನ್ನೊಂದು ಕಡೆಗೆ ಸಿನಿಮಾ ನೋಡ್ತಾ ಮೈಮೇಲೆ ದೈವ ಆವಾಹನೆ ಆದವರಂತೆ ನಟಿಸೋದು ದಿನೇ ದಿನೇ ಜಾಸ್ತಿ ಆಗ್ತಾ ಇದೆ. ಅಸಲಿಗೆ ಸಿನಿಮಾ ರಿಲೀಸ್ ಆದ ದಿನವೇ ಬೆಂಗಳೂರಿನಲ್ಲಿ ಒಬ್ಬ ಯುವಕ ದೈವ ಆವಾಹನೆ ಆದವರಂತೆ ನಟನೆ ಮಾಡಿದ್ದ. ಈಗ ಆತ ಕ್ಷಮೆ ಕೇಳಿದ್ದಾನೆ. ಈ ನಡುವೆ ತಮಿಳುನಾಡಿನ ದಿಂಡಿಗಲ್ನ ಚಿತ್ರಮಂದಿರದಲ್ಲಿ ಒಬ್ಬ ಯುವಕ ಪಂಜುರ್ಲಿ ದೈವದ ವೇಷ ತೊಟ್ಟು ಹುಚ್ಚು ಹುಚ್ಚಾಗಿ ನರ್ತಿಸಿದ್ದ. ಇದೇ ರೀತಿ ಅನೇಕ ಚಿತ್ರಮಂದಿರಗಳಲ್ಲಿ ವೀಕ್ಷಕರು ಹುಚ್ಚಾಟ ಮೆರೆದಿದ್ದಾರೆ.
ಹೀಗಾಗಿ ಇನ್ಮುಂದೆ ಯಾವುದೇ ಚಿತ್ರಮಂದಿರಗಳಲ್ಲಿ ಅಥವಾ ಸಭೆ, ಸಮಾರಂಭಗಳಲ್ಲಿ ಇಂಥಾ ದೈವ ಆವಾಹನೆ, ಅನುಕರಣೆ ಮಾಡಿದ್ದು ಕಂಡುಬಂದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ತಿವಿ ಅಂತ ಕಾಂತಾರ ಟೀಂ ಬಹಿರಂಗವಾಗಿ ಎಚ್ಚರಿಕೆ ನೀಡಿದೆ. ಸಿನಿಮಾ ನೋಡಿ ಎಂಜಾಯ್ ಮಾಡಿ.. ಆದ್ರೆ ಇಂಥಾ ಹುಚ್ಚಾಟ ಆಡಬೇಡಿ ಅಂತ ಚಿತ್ರತಂಡ ಎಚ್ಚರಿಸಿದೆ.
Comments are closed.