Bigg Boss Kannada: ಬಿಗ್‌ಬಾಸ್‌ ಮತ್ತೆ ರೀ ಓಪನ್‌: ಡಿಸಿಎಂ ಡಿಕೆಶಿ ಗೆ ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್‌

Share the Article

Bigg Boss Kannada: ಬಿಗ್‌ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಅವರ ಶ್ರಮದಿಂದ ಬಿಗ್‌ಬಾಸ್‌ ಶೋ ಮತ್ತೆ ಪ್ರಾರಂಭವಾಗುತ್ತಿದೆ ಎನ್ನಲಾಗಿದೆ. ಜಾಲಿವುಡ್‌ ಸ್ಟುಡಿಯೋನ ಇತರೆ ಎಲ್ಲಾ ಚಟುವಟಿಕೆಗಳು ಈಗಲೂ ಬಂದ್‌ ಆಗಿದೆ. ಆದರೆ ಬಿಗ್‌ಬಾಸ್‌ ಶೋಗೆ ಮಾತ್ರವೇ ಅವಕಾಶ ನೀಡಲಾಗಿದೆ. ಸುದೀಪ್‌ ಮಾಡಿದ ಕರೆಗಳಿಂದ, ಪ್ರಯತ್ನಗಳಿಂದಲೇ ಬಿಗ್‌ಬಾಸ್‌ ಶೋ ಗೆ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.

ನಿನ್ನೆ ರಾತ್ರಿ 11.20 ಕ್ಕೆ ಡಿಸಿಎಂ ಅವರು ಟ್ವೀಟ್‌ ಮಾಡಿ ಬಿಗ್‌ಬಾಸ್‌ ಶೋ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದರು. ಡಿಸಿಎಂ ಈ ಟ್ವೀಟ್‌ಗೆ ಕಿಚ್ಚ ಸುದೀಪ್‌ ಅವರು ಪ್ರತಿಕ್ರಿಯೆ ನೀಡಿದ್ದು, “ಸಮಯೋಚಿತ ಬೆಂಬಲಕ್ಕಾಗಿ ನಾನು ಡಿ.ಕೆ. ಶಿವಕುಮಾರ್ ಸರ್ ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗಲಭೆಗಳಲ್ಲಿ #BBK ಭಾಗಿಯಾಗಿಲ್ಲ ಅಥವಾ ಭಾಗವಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ DCM ಅವರನ್ನು ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಮತ್ತು #Nalpad ಅವರ ಸಮರ್ಪಿತ ಪ್ರಯತ್ನಗಳಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.

Comments are closed.