Mahindra Bolero : ಹೊಸ ಮಹೀಂದ್ರ ಬೊಲೆರೋ ಕಾರು ಲಾಂಚ್ -ಬೆಲೆ ಮಾತ್ರ ತುಂಬಾ ಕಡಿಮೆ

Mahindra Bolero : ಮಹೀಂದ್ರ ಬೊಲೆರೋ ಹಾಗೂ ಮಹೀಂದ್ರ ಬೊಲೆರೋ ನಿಯೋ ಎರಡು ಕಾರುಗಳು ಬಿಡುಗಡೆಯಾಗಿದ್ದು, ಜಿಎಸ್‌ಟಿ ಕಡಿತದಿಂದ ಕೇವಲ7.99 ಲಕ್ಷ ರೂಪಾಯಿಗೆ ಲಭ್ಯವಿದೆ. ಇದೀಗ ಈ ಹೊಸ ಕಾರನ್ನು ಕೊಳ್ಳಲು ಗ್ರಾಹಕರ ಮುಗಿ ಬಿದ್ದಿದ್ದಾರೆ.

ಹೌದು, ಕಳೆದ 25 ವರ್ಷಗಳಿಂದ ಭಾರತೀಯ ರಸ್ತೆಯಲ್ಲಿ ರಾಜನಂತೆ ಮೆರೆಯುತ್ತಿರುವ ಮಹೀಂದ್ರ ಬೊಲೆರೋ ಹಾಗೂ ಅಪ್‌ಡೇಟೆಟ್ ಮಹೀಂದ್ರ ಬೊಲೆರೋ ನಿಯೋ ಕಾರುಗಳು ಬಿಡುಗಡೆಯಾಗಿದೆ. ಈ ದೊಡ್ಡ ಕಾರು, ಆಕರ್ಷಕ ವಿನ್ಯಾಸದ ಕಾರು ಕೇವಲ 7.99 ಲಕ್ಷ ರೂಪಾಯಿಗೆ(ಎಕ್ಸ್ ಶೋ ರೂಂ) ಲಭ್ಯವಾಗುತ್ತಿದೆ. ಜಿಎಸ್‌ಟಿ ಕಡಿತದಿಂದ ಮಹೀಂದ್ರ ಬೊಲೆರೋ ಕಾರು ಇದೀಗ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯಲ್ಲಿ ಲಭ್ಯವಿದೆ.
ಮಹೀಂದ್ರ ಬೊಲೆರೋ ಕಾರು ವೇರಿಯೆಂಟ್
ಮಹೀಂದ್ರ ಬೊಲೆರೋ ಬಿ4: 7.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಹೀಂದ್ರ ಬೊಲೆರೋ ಬಿ6: 8.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಹೀಂದ್ರ ಬೊಲೆರೋ ಬಿ6(ಒ):9.09 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಮಹೀಂದ್ರ ಬೊಲೆರೋ ಬಿ8: 9.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)
ಇನ್ನು ಹೊಸ ಮಹೀಂದ್ರ ಬೊಲೆರೋದಲ್ಲಿ ಕೆಲ ಪ್ರಮುಖ ಬದಲಾವಣೆ ಮಾಡಲಾಗಿದೆ. ಮುಂಭಾಗದ ಗ್ರಿಲ್ ಬದಲಾಗಿದೆ. ಹೊಸ ಹಾಗೂ ಅತ್ಯಾಕರ್ಷಕ ವಿನ್ಯಾಸ ನೀಡಲಾಗಿದೆ. ಇದರ ಜೊತೆಗೆ ಹೊಸ ಬಣ್ಣ ಸ್ಟೆಲ್ತ್ ಬ್ಲಾಕ್, ಡೈಮಂಡ್ ವೈಟ್ ಸೇರಿದಂತೆ ಹೊಸ ಬಣ್ಣಗಳಲ್ಲಿ ಕಾರು ಲಭ್ಯವಿದೆ.
ಇದನ್ನೂ ಓದಿ:Crop Relief: ಮುಂಗಾರು ಬೆಳೆ ಹಾನಿ ಪರಿಹಾರ ಹಣ 10 ದಿನದಲ್ಲಿ ಬಿಡುಗಡೆ !! ಕೃಷಿ ಸಚಿವರಿಂದ ಘೋಷಣೆ
Comments are closed.