Aadhaar Card: ಒಂದೇ ಮೊಬೈಲ್ ಸಂಖ್ಯೆಗೆ ಎಷ್ಟು ಆಧಾರ್ ಲಿಂಕ್ ಮಾಡಬಹುದು?

Aadhaar Card: ಒಂದೇ ಮೊಬೈಲ್ ನಂಬರ್‌ಗೆ ಎಷ್ಟು ಆಧಾರ್ ಕಾರ್ಡ್‌ಗಳನ್ನು (Aadhaar Card) ಲಿಂಕ್ ಮಾಡಬಹುದು ಎಂಬ ಪ್ರಶ್ನೆ ಗೆ ಇಲ್ಲಿದೆ ಉತ್ತರ.

UDIAI ನಿಯಮದ ಪ್ರಕಾರ, ಒಂದು ಮೊಬೈಲ್ ಸಂಖ್ಯೆಗೆ ಬಹು ಆಧಾರ್ ಕಾರ್ಡ್‌ಗಳ ಲಿಂಕ್ಗೆ ಅವಕಾಶವಿದೆ. ಆದರೆ ಅದರ ಮೇಲೆ ಕೆಲವು ನಿರ್ಬಂಧಗಳಿವೆ. ಒಂದೇ ಕುಟುಂಬದ ಸದಸ್ಯರು ತಮ್ಮ ಆಧಾರ್ ಕಾರ್ಡ್‌ಗಳನ್ನು ಒಂದೇ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು.
ಅಂದರೆ ಒಂದೇ ಕುಟುಂಬದ ಸದಸ್ಯರು ತಮ್ಮ ಆಧಾರ್ ಕಾರ್ಡ್‌ಗಳನ್ನು ಸಾಮಾನ್ಯವಾಗಿ ಒಂದೇ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬಹುದು, ಆದರೆ ಅದು ಕುಟುಂಬ ಅಥವಾ ಪಾಲಕರ ನಂಬರ್ ಆಗಿರಬೇಕು. ಈ ಕ್ರಮವನ್ನು UIDAI ಕುಟುಂಬದ ಸುಲಭತೆಗಾಗಿ ಅನುಮತಿಸಿದ್ದು, ದುರುಪಯೋಗವನ್ನು ತಡೆಗಟ್ಟಲು ಗರಿಷ್ಠ ಐದು ಆಧಾರ್ ಕಾರ್ಡ್‌ಗಳವರೆಗೆ ಮಾತ್ರ ಲಿಂಕ್ ಮಾಡಲು ಅವಕಾಶ ನೀಡಿದೆ.
ಇದನ್ನೂ ಓದಿ:Telegram founder: ನನಗೆ ಎಷ್ಟು ಮಕ್ಕಳಿದ್ದಾರೆಂದು ತಿಳಿದಿಲ್ಲ – ಟೆಲಿಗ್ರಾಮ್ ಸಂಸ್ಥಾಪಕ ಡುರೊವ್
ಉದಾಹರಣೆಗೆ. ತಾಯಿ ಫೋನ್ ನಂಬರ್ ಗೆ ಮಕ್ಕಳ ನಂಬರ್ ಅನ್ನು ಲಿಂಕ್ ಮಾಡಬಹುದಾಗಿದೆ. ಅದೇ ಕುಟುಂಬ ಸದಸ್ಯರನ್ನು ಹೊರತು ಪಡಿಸಿ ಸ್ನೇಹಿತರು ಸೇರಿದಂತೆ ಯಾರ ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲು UIDAI ಅನುಮತಿ ನೀಡುವುದಿಲ್ಲ.
Comments are closed.