UPI ವಹಿವಾಟಿನಲ್ಲಿ ಮಹತ್ವದ ಬದಲಾವಣೆ – ಇನ್ಮುಂದೆ ಬೇಕಿಲ್ಲ OTP, ದೇಶಾದ್ಯಂತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ

Share the Article

UPI: ಭಾರತದಲ್ಲಿ (India) ಡಿಜಿಟಲ್ ಪಾವತಿ (Digital Payment) ಮಾಡುವ ವಿಧಾನ ಸಂಪೂರ್ಣವಾಗಿ ಬದಲಾಗಿದ್ದು, ಇನ್ಮುಂದೆ UPI ಬಳಕೆದಾರರು ಪಾವತಿಗಳನ್ನು ಮಾಡುವಾಗ ಪಿನ್ (PIN) ನಮೂದಿಸಬೇಕಾಗಿಲ್ಲ. ಬದಲಾಗಿ, ಅವರು ಮುಖ ಚಹರೆ ಅಥವಾ ಫಿಂಗರ್‌ಪ್ರಿಂಟ್ ಸ್ಕ್ಯಾನ್ ಬಳಸಿ ವಹಿವಾಟುಗಳನ್ನು ನಡೆಸಬಹುದಾಗಿದೆ.

ಹೌದು, ಇಂದಿನಿಂದ ಅಂದರೆ ಅಕ್ಟೋಬರ್ 8 ರಿಂದ ಫೇಶಿಯಲ್‌ ರೆಕಗ್ನಿಷನ್‌ (ಮುಖ ಗುರುತಿಸುವಿಕೆ) ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ಬಳಸಿಕೊಂಡು ಜನಪ್ರಿಯ ದೇಶೀಯ ಪಾವತಿ ಜಾಲವಾದ ಏಕೀಕೃತ ಪಾವತಿ ಇಂಟರ್ಫೇಸ್ (Unified Payments Interface-UPI) ಮೂಲಕ ಮಾಡಿದ ಪಾವತಿಗಳನ್ನು ಅನುಮೋದಿಸಲು ಭಾರತ ಬಳಕೆದಾರರಿಗೆ ಅವಕಾಶ ನೀಡಲಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಯುಪಿಐನಲ್ಲಿ ಬಯೋಮೆಟ್ರಿಕ್ ಅಥೆಂಟಿಕೇಶನ್​ಗೆ ಆಧಾರ್ ಸಿಸ್ಟಂ ಆಧಾರವಾಗಿರುತ್ತದೆ. ಬಳಕೆದಾರರು ಯುಪಿಐಗೆ ತಮ್ಮ ಆಧಾರ್ ಅನ್ನು ಲಿಂಕ್ ಮಾಡಿರಬೇಕಾಗಬಹುದು. ಬಳಕೆದಾರರ ಮುಖ ಚಹರೆ ಹಾಗೂ ಫಿಂಗರ್ ಪ್ರಿಂಟ್​ಗಳು ಆಧಾರ್ ಫ್ರೇಮ್​ವರ್ಕ್​ನಲ್ಲಿ ಸಂಗ್ರಹವಾಗಿರುತ್ತವೆ. ಪೇಮೆಂಟ್ ಮಾಡುವಾಗ ದೃಢೀಕರಣ ಮಾಡಲು ಈ ಬಯೋಮೆಟ್ರಿಕ್ ದತ್ತಾಂಶವನ್ನು ಬಳಸಲಾಗುತ್ತದೆ.

ಇಲ್ಲಿಯವರೆಗೆ, ಪ್ರತಿ UPI ವಹಿವಾಟಿಗೆ ಬಳಕೆದಾರರು 4 ಅಥವಾ 6 ಡಿಜಿಟ್‌ ಪಿನ್ ಅನ್ನು ನಮೂದಿಸಬೇಕಾಗಿತ್ತು. ಈಗ, ಫೇಸ್ ಸ್ಕ್ಯಾನ್ ಅಥವಾ ಫಿಂಗರ್‌ಪ್ರಿಂಟ್ ಈ ಪ್ರಕ್ರಿಯೆಯನ್ನು ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸುತ್ತದೆ. ಈ ಮೂಲಕ ಯುಪಿಐ ಮೂಲಕ ಹಣ ಪಾವತಿ ಮಾಡುವಾಗ ಪಿನ್ ನಂಬರ್ ನಮೂದಿಸುವುದು ಕಿರಿಕಿರಿ ಎನಿಸುತ್ತಿದ್ದವರು ನೆಮ್ಮದಿಯ ನಿಟ್ಟಿಸಿರು ಬಿಡಬಹುದು.

ಇದನ್ನೂ ಓದಿ;Telegram founder: ನನಗೆ ಎಷ್ಟು ಮಕ್ಕಳಿದ್ದಾರೆಂದು ತಿಳಿದಿಲ್ಲ – ಟೆಲಿಗ್ರಾಮ್ ಸಂಸ್ಥಾಪಕ ಡುರೊವ್

ಮುಂಬೈನ ಗ್ಲೋಬಲ್ ಫಿನ್​ಟೆಕ್ ಉತ್ಸವ ನಡೆಯುತ್ತಿದ್ದು ಅಲ್ಲಿ ಯುಪಿಐನ ಬಯೋಮೆಟ್ರಿಕ್ ಫೀಚರ್ ಅನ್ನು ಹೊರತಂದಿರುವ ಸಂಗತಿಯನ್ನು ಪ್ರಚುರಪಡಿಸುವ ನಿರೀಕ್ಷೆ ಇದೆ. ಇದರಿಂದ ಹೆಚ್ಚಿನ ದೇಶಗಳು ಯುಪಿಐ ಅಳವಡಿಸಲು ಉತ್ತೇಜನ ಸಿಗಬಹುದು.

Comments are closed.