Bigg Boss Kannada 12: ರೆಸಾರ್ಟ್‌ನಲ್ಲಿರುವ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಈ ಕಠಿಣ ನಿಯಮ ಪಾಲನೆ ಕಡ್ಡಾಯ!

Share the Article

Bigg Boss Kannada 12: ಕನ್ನಡ ಬಿಗ್‌ಬಾಸ್‌ ಸೀಸನ್‌ 12 ಈಗಲೇ ಭಾರೀ ಚರ್ಚೆಯಲ್ಲಿದೆ. ಮಾಲಿನ್ಯ ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಜಾಲಿವುಡ್‌ ಸ್ಟುಡಿಯೋ ಅನ್ನು ಅಧಿಕಾರಿಗಳು ಬಂದ್‌ ಮಾಡಿದ್ದು, ಮನೆಯಲ್ಲಿದ್ದ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲರನ್ನೂ ರಾಮನಗರದ ಬಳಿಕ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಲಾಗಿದೆ.

ರೆಸಾರ್ಟ್‌ನಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಕಠಿಣ ನಿಯಮಗಳನ್ನು ಹೇರಲಾಗಿದೆ. ರೆಸಾರ್ಟ್‌ನಲ್ಲಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. 12 ಕೋಣೆಗಳನ್ನು ಸ್ಪರ್ಧಿಗಳಿಗೆ ನೀಡಲಾಗಿದ್ದು, ಲಭ್ಯ ಮಾಹಿತಿ ಪ್ರಕಾರ, ಬಿಗ್‌ಬಾಸ್‌ ಸ್ಪರ್ಧಿಗಳ ಕೋಣೆಯಲ್ಲಿರುವ ಟಿವಿಗಳನ್ನು ತೆಗೆದು ಹಾಕಲಾಗಿದೆ. ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೇ ಬಿಗ್‌ಬಾಸ್‌ ಸ್ಪರ್ಧಿಗಳು ರೆಸಾರ್ಟ್‌ನಲ್ಲಿ ಇರಬೇಕಿದೆ.

ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಆಯೋಜಕರು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಎಲ್ಲಾ ಸ್ಪರ್ಧಿಗಳ ಮನೆಯವರಿಗೆ ಮಾಹಿತಿ ನೀಡಲಾಗಿದೆ. ರೆಸಾರ್ಟ್‌ನಲ್ಲಿರುವ ಸಮಯದಲ್ಲೂ ಸ್ಪರ್ಧಿಗಳು ಕೆಲವು ನಿಯಮಗಳ ಪಾಲನೆ ಮಾಡಬೇಕು. ಟಿವಿ ವೀಕ್ಷಿಸುವಂತಿಲ್ಲ, ಮೊಬೈಲ್‌ ಬಳಕೆ ಇಲ್ಲ, ಬಿಗ್‌ಬಾಸ್‌ ಆಯೋಜಕರ ಹೊರತಾಗಿ ಇನ್ಯಾರ ಜೊತೆ ಸಂಪರ್ಕ ಇಡುವಂತಿಲ್ಲ. ರೆಸಾರ್ಟ್‌ನ ಸಿಬ್ಬಂದಿ ಜೊತೆಗೂ ಮಾತುಕತೆ ಮಾಡುವಂತಿಲ್ಲ.

ಇದನ್ನೂ ಓದಿ;ರಾಜ್ಯದ ಜಾತಿ ಗಣತಿ ಸಮೀಕ್ಷಾದಾರರಿಗೆ ತಲಾ 20,000 ರೂ. ಗೌರವಧನ- ಸಿಎಂ ಸಿದ್ದರಾಮಯ್ಯ ಘೋಷಣೆ

ಈಗಾಗಲೇ ಆಯೋಜಕರು, ಜಾಲಿವುಡ್‌ ಸ್ಟುಡಿಯೋನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಒಂದು ವೇಳೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಿದ್ದಲ್ಲಿ, ಹೊರ ರಾಜ್ಯದಲ್ಲಿ ರೆಡಿ ಇರುವ ಸೆಟ್‌ಗೆ ಬಿಗ್‌ಬಾಸ್‌ ಕನ್ನಡ ಕಾರ್ಯಕ್ರಮ ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.