Bengaluru : ದೇವರಿಗೂ ಇದೆಯಾ ಜಾತಿ? ದೇವಸ್ಥಾನಕ್ಕೆ ಜಾತಿ ಸಮೀಕ್ಷೆ ಸ್ಟಿಕರ್ ಅಂಟಿಸಿದ ಅಧಿಕಾರಿಗಳು

Bengaluru : ರಾಜ್ಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಜಾತಿ ಸಮೀಕ್ಷೆ ನಡೆಯುತ್ತಿದೆ. ಅಧಿಕಾರಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಿ ಬರುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ದೇವಾಲಯಕ್ಕೂ ಕೂಡ ಜಾತಿ ಸಮೀಕ್ಷೆಯ ಸ್ಟಿಕ್ಕರ್ ಅಂಟಿಸಿದ್ದು ದೇವರಿಗೂ ಜಾತಿ ಇದೆಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಹೌದು. ಬೆಂಗಳೂರಿನ ವರದಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಗಣತಿದಾರರು ಸ್ಟಿಕ್ಕರ್ ಅಂಟಿಸಿ ಹೋಗಿರುವ ಘಟನೆ ನಡೆದಿದೆ. ಎಸ್.ಪಿ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇಗುಲಕ್ಕೆ ಸ್ಟಿಕ್ಕರ್ ಅಂಟಿಸಿರೋದು ನಿರ್ಲಕ್ಷ್ಯ , ದೇವರಿಗೆ ಸಮೀಕ್ಷೆ ಮಾಡಲು ಮುಂದಾಗಿರಬೇಕು ಎಂದು ಅರ್ಚಕರು ಹೇಳಿದ್ದಾರೆ. ಈ ಕುರಿತಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Gold Rate: ಫೆಡ್ ದರ ಕಡಿತದ ಅಪಾಯ: ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಚಿನ್ನದ ಬೆಲೆ
Comments are closed.