Home Jobs Job Alert: ಪಿಯುಸಿ, ಪದವಿ ಆದವರಿಗೆ ವಿವಿಧ ಹುದ್ದೆಗಳಿಗೆ ಕೆಇಎ ಅರ್ಜಿ ಅಹ್ವಾನ

Job Alert: ಪಿಯುಸಿ, ಪದವಿ ಆದವರಿಗೆ ವಿವಿಧ ಹುದ್ದೆಗಳಿಗೆ ಕೆಇಎ ಅರ್ಜಿ ಅಹ್ವಾನ

Job Alert

Hindu neighbor gifts plot of land

Hindu neighbour gifts land to Muslim journalist

Job Alert: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಸ್‌ಡಿಎ, ಎಫ್‌ಡಿಎ ಸೇರಿದಂತೆ ವಿವಿಧ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದೆ.

ಈ ಕುರಿತು ಅಧಿಸೂಚನೆ ಕರಡು ಪ್ರಕಟಿಸಿರುವ ಕೆಇಎ, ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು ಎಂದು ತಿಳಿಸಿದೆ.ಯಾವ್ಯಾವ ಇಲಾಖೆಯಲ್ಲಿ ಎಷ್ಟು ಖಾಲಿ ಹುದ್ದೆಗಳು ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 18, ಕರ್ನಾಟಕ ಸೋಪ್ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ನಲ್ಲಿ 14 , ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 40, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 19, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 63 , ಕೃಷಿ ಮಾರಾಟ ಇಲಾಖೆಯಲ್ಲಿ 180 , ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 50 ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಿದೆ.

ಯಾವ್ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ ?

1. ಪ್ರಥಮ ದರ್ಜೆ ಸಹಾಯಕರು – 84

2. ದ್ವಿತೀಯ ದರ್ಜೆ ಸಹಾಯಕರು – 44

3. ಮಾರಾಟ ಸಹಾಯಕರು- 75

4. ಸಹಾಯಕ ಅಭಿಯಂತರರು – 15

5. ಲೆಕ್ಕಪತ್ರ ಹಿರಿಯ ಮತ್ತು ಕಿರಿಯ ಅಧಿಕಾರಿ – 14

6. ನಿರ್ವಾಹಕ ಹುದ್ದೆಗಳು – 60

7. ಗ್ರಂಥಪಾಲಕರು – 10

8. ಸಹಾಯಕ ಸಂಚಾರ ನಿರೀಕ್ಷಕ – 19

ವೇತನ ಶ್ರೇಣಿ

ಪ್ರಥಮ ದರ್ಜೆ ಸಹಾಯಕ ಹುದ್ದೆಗೆ 27,650-52,650, ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ 21,400-42,000, ಲೆಕ್ಕ ಮಾರುಕಟ್ಟೆಯ ಅಧಿಕಾರಿ ಹುದ್ದೆಗೆ 40,900-78,200, ಕಿರಿಯ ಅಧಿಕಾರಿ ಹುದ್ದೆಗೆ 61,300-1,12,900, ಸಹಾಯಕ ಅಭಿಯಂತರ ಹುದ್ದೆಗೆ 43,100-83,900, ಗ್ರಂಥಪಾಲಕ ಹುದ್ದೆಗಳಿಗೆ 33,450-62,600, ಮಾರಾಟ ಸಹಾಯಕರು 34,100-67,600, ಸಹಾಯಕ ಸಂಚಾರ ನಿರೀಕ್ಷಕ ಹುದ್ದೆಗೆ 22,390-33,320, ನಿರ್ವಾಹಕ ಹುದ್ದೆಗೆ 18,660 -25,300 ರೂ. ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ

ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದೇಶದಲ್ಲಿ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. ದ್ವಿತೀಯ ದರ್ಜೆ ಸಹಾಯಕ, ಮಾರಾಟ ಸಹಾಯಕರು, ಕಿರಿಯ ಸಹಾಯಕರು, ಸಂಚಾರ ನಿಯಂತ್ರಕರು ಮತ್ತು ನಿರ್ವಾಹಕ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ನಿರ್ವಾಹಕರ ಬ್ಯಾಡ್ಜ್‌ ಹೊಂದಿರಬೇಕು. ಸಹಾಯಕ ಲೆಕ್ಕಿಗ ಹುದ್ದೆಗೆ ವಾಣಿಜ್ಯಶಾಸ್ತ್ರದಲ್ಲಿ ಪದವಿ ಪಡೆದಿರಬೇಕು.

ಇದನ್ನೂ ಓದಿ:Police: ‘PSI’ 545 ಹುದ್ದೆ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ!

ದೈಹಿಕ ಅರ್ಹತೆ

ನಿರ್ವಾಹಕ ಹುದ್ದೆಗೆ ಪುರುಷರು 160 ಸೆ.ಮೀ ಹಾಗೂ ಮಹಿಳೆಯರು 150 ಸೆ. ಮೀ ಎತ್ತರ ಹೊಂದಿರಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ಕೆಇಎ ತಿಳಿಸಿದೆ.