Home News Police: ‘PSI’ 545 ಹುದ್ದೆ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ!

Police: ‘PSI’ 545 ಹುದ್ದೆ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ!

Hindu neighbor gifts plot of land

Hindu neighbour gifts land to Muslim journalist

Police: 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ಅಂತಿಮ ಹಂತದ ನೇಮಕಾತಿ ಪ್ರಕ್ರಿಯೆಗೆ ಕರ್ನಾಟಕ ಆಡಳಿತಾತ್ಮಕನ್ಯಾಯ ಮಂಡಳಿ (KAT) ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಡಿಜಿಪಿ ರಾಜ್ಯದ ಎಲ್ಲ ಪೊಲೀಸ್‌ ಕಚೇರಿಗಳಿಗೆ ತುರ್ತು ಸಂದೇಶ ರವಾನಿಸಿದ್ದು, ಆ.25ರಂದು ಹೊರಡಿಸಿದ್ದ 545 ಪಿಎಸ್‌ಐ ನೇಮಕಾತಿ ಅಂತಿಮ ಆಯ್ಕೆ ಪಟ್ಟಿ ಆದೇಶಕ್ಕೆ ಕೆಎಟಿ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ 545 ಪಿಎಸ್‌ಐ ನೇಮಕಾತಿ ಸಂಬಂಧಿಸಿ ಎಲ್ಲ ಪ್ರಕ್ರಿಯೆಗಳನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:BBK 12: ಮೊದಲನೇ ವಾರವೇ ಬಿಗ್‌ಬಾಸ್‌ ಮನೆಯಲ್ಲಿ ಎಲಿಮಿನೇಟ್‌ ಆದ ಪ್ರಬಲ ಸ್ಪರ್ಧಿ ಇವರೇ

ಪೊಲೀಸ್ ವಿಭಾಗದಿಂದ ನೇಮಕಾತಿ ಹೊರಡಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ವಿ. ತೇಜಸ್‌ ಸೇರಿ ಮತ್ತಿತರ ಅಭ್ಯರ್ಥಿಗಳು ಕಳೆದ ತಿಂಗಳು ಕೆಎಟಿಗೆ ಅರ್ಜಿ ಸಲ್ಲಿಸಿಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಬೆಂಗಳೂರು ಪ್ರಧಾನ ಪೀಠ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಅ.9ಕ್ಕೆ ನಿಗದಿಪಡಿಸಿದೆ.