Rishab Shetty: ರಿಷಬ್ ಶೆಟ್ಟಿಯ ಒಟ್ಟು ಆಸ್ತಿ ಎಷ್ಟು? ಕಾಂತಾರ ಸಿನಿಮಾಕ್ಕೆ ಸಿಗುವ ಸಂಭಾವನೆ ಎಷ್ಟು?

Share the Article

Rishab Shetty : ಕಾಂತಾರದ ಸ್ಟಾರ್ ಎಂದೇ ಕ್ಯಾತರಾಗಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪುಗೊಂಡಿದ್ದಾರೆ. ಇದೀಗ ಕಾಂತರಾ ಚಾಪ್ಟರ್ 1 ರಿಲೀಸ್ ಆಗಿದ್ದು ಅಬ್ಬರದ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರ ಒಟ್ಟು ಆಸ್ತಿ ಎಷ್ಟಿರಬಹುದು ಎಂಬ ವಿಚಾರ ಕೂಡ ಚರ್ಚೆಗೆ ಬಂದಿದೆ. ಹಾಗಿದ್ದರೆ ಆ ಕುರಿತು ಇಲ್ಲಿದೆ ನೋಡಿ ಡೀಟೇಲ್ಸ್.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬರೋಬ್ಬರಿ ಕೋಟಿ ರೂ.ಗಳ ದೊಡ್ಡ ಬಂಗಲೆ ಹೊಂದಿದ್ದಾರೆ. 83 ಲಕ್ಷ ರೂ. ಐಷಾರಾಮಿ ಕಾರುಗಳ ಹೊಂದಿದ್ದಾರೆ. 2022 ರ ಬಿಳಿ ಆಡಿ Q7 ಸೇರಿ ರೆಡ್ ರೇಜ್ 2021 ಮಹೀಂದ್ರಾ ಥಾರ್, 2020 ರ ಜೀಪ್ ಕಂಪಾಸ್ ಟ್ರೈಲ್‌ಹಾಕ್, ಮತ್ತು 2019 ರ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಕೂಡ ಅವರ ಸಂಗ್ರಹದಲ್ಲಿದೆ.

ಇದನ್ನೂ ಓದಿ:DK Shivkumar : ಡಿಕೆಶಿ ಮನೆಗೆ ಜಾತಿ ಗಣತಿಗಾಗಿ ಬಂದ ಅಧಿಕಾರಿಗಳು – ಪ್ರಶ್ನೆಗಳನ್ನು ಕೇಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ!!

ಅವರು ಒಟ್ಟಾರೆಯಾಗಿ 12ರಿಂದ 15 ಕೋಟಿ ರೂಪಾಯಿ ನಿವ್ವಳ ಆಸ್ತಿ ಹೊಂದಿದ್ದಾರೆ. ಇನ್ನು ಸಿನಿಮಾವೊಂದರಲ್ಲಿ ನಟನೆಗಾಗಿ 4 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದ್ರೆ ಕಾಂತಾರ ಸಿನಿಮಾಗಾಗಿ ಅವರು ಶೇರು ಪಡೆದುಕೊಂಡಿದ್ದು ಅದು 50ರಿಂದ 100 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ.

Comments are closed.