Karnataka: ರಾಜ್ಯದಲ್ಲಿ ‘ಜಾತಿ ಗಣತಿ’ ಸಮೀಕ್ಷೆ ನಡೆಸಿದ ಬಳಿಕ ಕುಟುಂಬದ ಮಾಹಿತಿಯನ್ನು ‘PDF’ ಮೂಲಕ ನೀಡದಂತೆ ಸರ್ಕಾರ ಆದೇಶ

Karnataka: ರಾಜ್ಯದಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಸಿದ ಬಳಿಕ ಕುಟುಂಬದ ಮಾಹಿತಿಯನ್ನು PDF ಮೂಲಕ ನೀಡದಂತೆ ಸರ್ಕಾರ ಆದೇಶ ಹೊರಡಿಸಿದೆ.


ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮೊಬೈಲ್ ನೆಟ್ವರ್ಕ್ ಇಲ್ಲದೇ ಇರುವ ಪ್ರದೇಶಗಳಲ್ಲಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಹಾಗೂ ಪ್ರತಿ ಕುಟುಂಬದ ಸಮೀಕ್ಷೆ ಪೂರ್ಣಗೊಂಡ ಬಳಿಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ನಾಗರಿಕರು/ಕುಟುಂಬಗಳಿಗೆ ಅವರು ನೀಡಿದ ಮಾಹಿತಿಯ PDF ಅನ್ನು ಕಳುಹಿಸಲು ತಿಳಿಸಲಾಗಿತ್ತು.
ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ದಿನಾಂಕ: 25-09-2025 ರಲ್ಲಿ “The Commission shall file an affidavit within a period of one working day, clearly disclosing the steps taken for ensuring that the data collected will be kept confidential and it will not be accessible to any person other than the Commission” ಸೂಚಿಸಲಾಗಿರುತ್ತದೆ. ಅದರಂತೆ, ಆಯೋಗದಿಂದ ಮಾನ್ಯ ಉಚ್ಚ ನ್ಯಾಯಾಲಯಕ್ಕೆ Affidavit ಅನ್ನು ಸಲ್ಲಿಸಲಾಗಿರುತ್ತದೆ.
ಆದ್ದರಿಂದ, ಮಾನ್ಯ ಉಚ್ಚ ನ್ಯಾಯಾಲಯ ಆದೇಶದ ಉಲ್ಲಂಘನೆಯಾಗಬಾರದೆಂಬ ಹಿನ್ನೆಲೆಯಲ್ಲಿ, ಕುಟುಂಬದ ಸಮೀಕ್ಷೆ ನಡೆಸಿದ ಬಳಿಕ PDF ಅನ್ನು Share ಮಾಡದೇ ಇರಲು ದಿನಾಂಕ: 03-10-2025 ರಂದು ನಡೆದ ಆಯೋಗದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದ್ದರಿಂದ, ಕುಟುಂಬದ ಸಮೀಕ್ಷೆ ಮುಗಿದ ಬಳಿಕ PDF Generate ಮಾಡಲು ಹಾಗೂ Share ಮಾಡಲು ಅವಕಾಶವಿರುವುದಿಲ್ಲ ಆದ್ದರಿಂದ ಮಾಹಿತಿಯನ್ನು Share ಮಾಡದಂತೆ ಕ್ರಮ ವಹಿಸಲು ಕೋರಿದೆ.
ಇದನ್ನೂ ಓದಿ:Cinema: 2021ನೇ ಸಾರಿನ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಪಟ್ಟಿ ಪ್ರಕಟ
Comments are closed.