Cinema: 2021ನೇ ಸಾಲಿನ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಪಟ್ಟಿ ಪ್ರಕಟ

Cinema: 2021ನೇ ಸಾಲಿನ ವಾರ್ಷಿಕ ಚಲನಚಿತ್ರ (Cinema) ಪ್ರಶಸ್ತಿಗಳನ್ನು ರಾಜ್ಯ ಸರ್ಕಾರದಿಂದ ಪ್ರಕಟಿಸಲಾಗಿದೆ. ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಅತ್ಯುತ್ತಮ ನಟ ಪ್ರಶಸ್ತಿ ಆಯ್ಕೆ ಆಗಿದೆ. ‘ಮ್ಯೂಟ್’ ಸಿನಿಮಾದ ನಟನೆಗಾಗಿ ಅರ್ಚನಾ ಜೋಯಿಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಆಗಿದೆ.


‘ದೊಡ್ಡಹಟ್ಟಿ ಬೈರೇಗೌಡ’ ಚಿತ್ರಕ್ಕೆ ಅತ್ಯುತ್ತಮ ಮೊದಲ ಚಿತ್ರ, ‘ಯುವರತ್ನ’ಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಗೆ ಆಯ್ಕೆ ಆಗಿದೆ. ‘ರತ್ನನ್ ಪ್ರಪಂಚ’ ಚಿತ್ರದ ಅಭಿನಯಕ್ಕಾಗಿ ಪ್ರಮೋದ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಉಮಾಶ್ರಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ‘ಕೇಕ್’ ಚಿತ್ರದ ನಟನೆಗಾಗಿ ಮಾಸ್ಟರ್ ಅತೀಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಲಭಿಸಿದ್ದರೇ, ‘ಭೈರವಿ’ ಚಿತ್ರದ ಅಭಿನಯಕ್ಕಾಗಿ ಬೇಬಿ ಭೈರವಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ನೀಡಲಾಗಿದೆ.


ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಪ್ರಶಸ್ತಿಯನ್ನು ‘ಭಾರತದ ಪ್ರಜೆಗಳಾದ ನಾವು’ ಸಿನಿಮಾಗೆ ದೊರಕಿದೆ. ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಚಿತ್ರಕ್ಕೆ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ’ ಪ್ರಶಸ್ತಿ ಲಭಿಸಿದೆ. ‘ಕೇಕ್’ ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಂದಿದೆ. ಶಂಕರ್ ಗುರು ಅವರಿಗೆ ‘ಬಡವ ರಾಸ್ಕಲ್’ ಚಿತ್ರಕ್ಕಾಗಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿಗೆ ಆಯ್ಕೆ ಆಗಿದೆ.
ಇದನ್ನೂ ಓದಿ:Viral Video : ದುರ್ಗಾ ಪೂಜೆಯಲ್ಲಿ ನಟಿ ಕಾಜೋಲ್ ಎದೆಗೆ ಕೈ ಹಾಕಿದ ಕಾಮುಕ – ಆಘಾತಕಾರಿ ವಿಡಿಯೋ ವೈರಲ್ |
Comments are closed.