Asia Cup-2025: ಏಷ್ಯಾ ಕಪ್ ಟ್ರೋಫಿ ಕದ್ದಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ : ಮೊಕ್ಸಿನ್ ನಬ್ಬಿಗೆ ಪಾಕ್ನಲ್ಲಿ ಚಿನ್ನದ ಪದಕ

Asia Cup-2025: ಏಷ್ಯಾ ಕಪ್ 2025 ಟ್ರೋಫಿ ಹೊಸ ತಿರುವು ಪಡೆದುಕೊಂಡಿದ್ದು, ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ನಂತರ ಭಾರತವು ನಖ್ವಿಯಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿತು. ಇದರ ನಂತರ, ನಖ್ವಿ ತಮ್ಮೊಂದಿಗೆ ಕಪ್ ಅನ್ನು ತೆಗೆದುಕೊಂಡು ಹೋದರು ಮತ್ತು ಭಾರತೀಯ ಆಟಗಾರರು ಟ್ರೋಫಿಯಿಲ್ಲದೆ ವಿಜಯವನ್ನು ಆಚರಿಸಬೇಕಾಯಿತು.

ಇದೀಗ ಏಷ್ಯಾ ಕಪ್ ಟ್ರೋಫಿ “ಕದ್ದಿದ್ದಕ್ಕಾಗಿ” ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮೊಕ್ಸಿನ್ ನಖಿ ಪಾಕಿಸ್ತಾನದಲ್ಲಿ ಚಿನ್ನದ ಪದಕ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಕರಾಚಿ ಬ್ಯಾಸ್ಕೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಗುಲಾಮ್ ಅಬ್ಬಾಸ್ ನಖಿಗೆ ‘ಶಹೀದ್ ಜುಲ್ಪಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕ’ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ. ಪಾಕ್ ಅಧಿಕಾರಿಗಳ ಪ್ರಕಾರ, ಭಾರತದ ಬೇಡಿಕೆಗಳ ವಿರುದ್ಧ ದೃಢ, ತತ್ವಬದ್ಧ ನಿಲುವಿಗಾಗಿ ನಖಿಗೆ ಇದನ್ನು ನೀಡಲಾಗುತ್ತಿದೆ.
ಭಾರತ ತಂಡ ಇನ್ನೂ ಟ್ರೋಫಿಯನ್ನು ಸ್ವೀಕರಿಸಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಪರಿಸ್ಥಿತಿಯಿಂದ ಅತೃಪ್ತರಾಗಿದ್ದು, ನಖ್ವಿ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಔಪಚಾರಿಕ ದೂರು ಸಲ್ಲಿಸುವ ಬಗ್ಗೆ ಯೋಚಿಸುತ್ತಿದೆ. ಭಾರತವು ಟ್ರೋಫಿಯನ್ನು ಬಯಸಿದರೆ, ಅವರು ಅದನ್ನು ಎಸಿಸಿ ಕಚೇರಿಯಲ್ಲಿ ನೇರವಾಗಿ ತಮ್ಮಿಂದ ಪಡೆಯಬೇಕು ಎಂದು ನಖ್ವಿ ಬಿಸಿಸಿಐಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
Comments are closed.