Home News Kantara – 1: ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಗ್ಗೆ ರಾಕಿ ಭಾಯ್‌ ಯಶ್‌ ಏನಂದ್ರು?

Kantara – 1: ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಗ್ಗೆ ರಾಕಿ ಭಾಯ್‌ ಯಶ್‌ ಏನಂದ್ರು?

Hindu neighbor gifts plot of land

Hindu neighbour gifts land to Muslim journalist

Kantara – 1: ಕಾಂತಾರ ಸಿನಿಮಾ ತೆರೆಕಂಡು ಇಂದಿಗೆ ಎರಡನೇ ದಿನ. ಈಗಾಗಲೇ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳೇ ಕೇಲಿ ಬರುತ್ತಿದೆ. ಎಲ್ಲಾ ಥಿಯೇಟರ್‌ಗಳು ಕಿಕ್ಕಿರಿದು ತುಂಬಿದೆ. ಅಲ್ಲದೆ ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾಂತಾರ ರೀತಿಯಲ್ಲೇ ಇಡೀ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದ ಕೆಜಿಎಫ್‌ ಸಿನಿಮಾದ ರಾಖಿ ಭಾಯ್‌ ಕಾಂತರ ಚಾಪ್ಟರ್‌ ೧ ನೋಡಿ ಏನಂದ್ರು ಅಂತ ನೋಡಿ.

‘ಕಾಂತಾರ ಚಾಪ್ಟರ್ 1’ ಸಿನಿಮಾ ಕನ್ನಡ ಮತ್ತು ಭಾರತೀಯ ಸಿನಿಮಾಗಳಿಗೆ ಹೊಸ ಮಾನದಂಡ ನಿರ್ಮಿಸಿದೆ ಎಂದು ಸಿನಿಮಾ ನೋಡಿದ ಬಳಿಕ ನಟ ಯಶ್ ತಮ್ಮ X ಖಾತೆಯಲ್ಲಿ ಬರೆದಿದ್ದಾರೆ. ‘ಕಾಂತಾರ’ ಸಿನಿಮಾದ ಕುರಿತಾಗಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬದ್ಧತೆ, ದೃಢನಿಶ್ಚಯವನ್ನು ಶ್ಲಾಘಿಸಿದ ಯಶ್, ಈ ಯೋಚನೆಗೆ ಬೆನ್ನಲುಬಾಗಿ ನಿಂತ ಹೊಂಬಾಳೆ ಫಿಲ್ಡ್ ಅನ್ನು ಕೊಂಡಾಡಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿರುವ ದಿವಂಗತ ನಟ ರಾಕೇಶ್ ಪೂಜಾರಿ ನಟನೆಯನ್ನು ಮೆಚ್ಚಿ ಯಶ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ನಿಮ್ಮ ದೃಢನಿಶ್ಚಯ, ಸ್ಥಿತಿಸ್ಥಾಪಕತ್ವ ಮತ್ತು ಸಂಪೂರ್ಣ ಭಕ್ತಿ ಪ್ರತಿ ಫ್ರೇಮ್‌ನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ಬದಲಾಗುತ್ತದೆ.

ಹಾಗೆ ನಿರ್ಮಾಪಕ ವಿಜಯ ಕಿರಂಗದೂರು ಸರ್‌ ಮತ್ತು ಮತ್ತು ಹೊಂಬಾಳೆ ಫಿಲ್ಮ್ಸ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ನಿಮ್ಮ ದೃಷ್ಟಿಕೋನ ಮತ್ತು ಬೇಷರತ್ತಾದ ಬೆಂಬಲ ನಿರಂತರವಾಗಿ ಉದ್ಯಮದ ಮಟ್ಟವನ್ನು ಹೆಚ್ಚಿಸುತ್ತಿದೆ.

ನಾಯಕಿ ನಟಿ ರುಕ್ಮಿಣಿ ವಸಂತ ಮತ್ತು ಇನ್ನೊಬ್ಬ ಕಾಂತಾರದ ಪ್ರಮುಖ ನಟ ಗುಲ್ಷನ್‌ ದೇವಯ್ಯ ನೀವು ಅದ್ಭುತ, ಶಕ್ತಿಶಾಲಿ ಪ್ರದರ್ಶನಗಳನ್ನು ನೀಡಿದ್ದೀರಿ ಎಂದು ಯಶ್‌ ಶ್ಲಾಘಿಸಿದ್ದಾರೆ.

ಇನ್ನು ಅಜನೀಶ್‌ ಬಿ ಅವರ ಸಂಗೀತದ ಬಗ್ಗೆ ಬರೆದ ಯಶ್‌ ಅವರು ನಿಮ್ಮ ಸಂಗೀತವು ಆ ಫ್ರೇಮ್‌ಗಳಿಗೆ ಜೀವ ತುಂಬುತ್ತದೆ.

ಇದನ್ನೂ ಓದಿ:Health Tips: ಇದು ನಿಮಗೆ ಗೊತ್ತೇ? ಹಾಲನ್ನು ಕುದಿಸುವುದರಿಂದ ಆಗುವ ಹಾನಿಕಾರಕ ಪರಿಣಾಮಗಳೇನು?

ಅರವಿಂದ್ ಕಶ್ಯಪ್, ನಿಮ್ಮ ಅದ್ಭುತ ಕ್ಯಾಮೆರಾ ಕೆಲಸವು ಆ ಜಗತ್ತಿಗೆ ಜೀವ ತುಂಬಿತು. ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ಥುಮಿನಾಡ್ ಮತ್ತು ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಯ ಅತ್ಯುತ್ತಮ ಕೆಲಸ. ಈ ಚಿತ್ರಕ್ಕೆ ರಾಕೇಶ್ ಪೂಜಾರಿ ನೀಡಿದ ಬೆಳಕಿನ ಕ್ಷಣಗಳು ಈಗ ಅವರ ಪ್ರತಿಭೆಗೆ ಸೂಕ್ತವಾದ ಗೌರವವಾಗಿದೆ. ಒಟ್ಟಾಗಿ, ನೀವೆಲ್ಲರೂ ಸಂಪೂರ್ಣವಾಗಿ ಅದ್ಭುತ ಸಿನಿಮಾವನ್ನು ರಚಿಸಿದ್ದೀರಿ! ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.