Home News Usain Bolt: ಮಿಂಚಿನ ಓಟಗಾರ ವಿಶ್ವ ವಿಜೇತ ಉಸೇನ್ ಬೋಲ್ಟ್ ಈಗ ಹೇಗಿದ್ದಾರೆ? ಅವರ ಆರೋಗ್ಯದ...

Usain Bolt: ಮಿಂಚಿನ ಓಟಗಾರ ವಿಶ್ವ ವಿಜೇತ ಉಸೇನ್ ಬೋಲ್ಟ್ ಈಗ ಹೇಗಿದ್ದಾರೆ? ಅವರ ಆರೋಗ್ಯದ ಬಗ್ಗೆ ಹರಡುತ್ತಿರುವ ಸುದ್ದಿ ನಿಜನಾ?

Hindu neighbor gifts plot of land

Hindu neighbour gifts land to Muslim journalist

Usain Bolt: ಒಂದು ಕಾಲದಲ್ಲಿ ವಿಶ್ವದ ವೇಗವಾದ ಮನುಷ್ಯ ಎಂದು ಖ್ಯಾತಿ ಪಡೆದಿದ್ದ ಉಸೇನ್ ಬೋಲ್ಟ್ ಈಗ ಒಂದು ಫ್ಲೋರ್ ಹತ್ತುವುದಕ್ಕೂ ಆಗುವುದಿಲ್ಲಂತೆ ವಯಸ್ಸು ಎಲ್ಲರನ್ನೂ ಕಾಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ ಅಂತ ಸಾಮಾಜಿಕ ಜಾಲ ತಾಣಗಳಲ್ಲಿ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಅತಿರೇಕದ ವ್ಯಾಯಾಮಗಳು ಅಥವಾ ದೈಹಿಕ ಚಟುವಟಿಕೆಗಳು ಉದಾಹರಣೆಗೆ, ಭಾರ ಎತ್ತುವುದು, ವೇಗದ ಓಟ, ಬಾಕ್ಸಿಂಗ್, ಆಧುನಿಕ ಕುಸ್ತಿ, ದೇಹದಾರ್ಢ್ಯ ಬೆಳೆಸುವುದು, ಇತ್ಯಾದಿಗಳು ಆರೋಗ್ಯಕ್ಕೆ ಉತ್ತಮ ವ್ಯಾಯಾಮಗಳಲ್ಲ! ಅವು ತಾತ್ಕಾಲಿಕ ಸುಧೃಢತೆಯ ಭ್ರಮೆಯನ್ನು ನೀಡುತ್ತವೆ. ಆದರೆ, ದೀರ್ಘಕಾಲದಲ್ಲಿ ಅವುಗಳಿಂದ ದುಷ್ಪರಿಣಾಮಗಳು ಸಂಭವಿಸುತ್ತವೆ. ಇಂಥ ಉದಾರಣೆಗಳು ಸಾಕಷ್ಟು ಇವೆ ಇತ್ತೀಚಿಗೆ ಜಿಮ್ ಗಳಲ್ಲಿ ಹೃದಯಾಘಾತದಿಂದ ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವ ಯುವಕರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ! ಎಂದು ಈ ಸುದ್ದಿ ಹೇಳುತ್ತದೆ.

ದಶಕಗಳ ಹಿಂದೆ ಓಟದಲ್ಲಿ ವಿಶ್ವ ದಾಖಲೆಗಳನ್ನು ಸ್ಥಾಪಿಸಿ ಮಿಂಚಿದ ಉಸೇನ್ ಬೋಲ್ಟ್ 2017 ರಲ್ಲಿ ನಿವೃತ್ತರಾದರು. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಅವರ ಆರೋಗ್ಯ ಅಥವಾ ದೈಹಿಕ ಸ್ಥಿತಿ ಬಗ್ಗೆ ಸುಳ್ಳು ಮಾಹಿತಿ ಹರಡಲಾಗುತ್ತಿದೆ. ಉಸೇನ್ ಬೋಲ್ಟ್ ಆರೋಗ್ಯವಾಗಿದ್ದಾರೆ.

ಜಮೈಕಾದ ಉಸೇನ್ ಬೋಲ್ಟ್, “ಮಿಂಚಿನ ಬೋಲ್ಟ್” ಎಂದೂ ಕರೆಯಲ್ಪಡುವ ಇವರು, ವಿಶ್ವದ ಶ್ರೇಷ್ಠ ಓಟಗಾರರಲ್ಲಿ ಒಬ್ಬರು. 100 ಮೀ ಮತ್ತು 200 ಮೀ ಓಟದಲ್ಲಿ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. 100 ಮೀ ಓಟವನ್ನು ಕೇವಲ 9.58 ಸೆಕೆಂಡ್‌ಗಳಲ್ಲಿ ಪೂರೈಸಿದ್ದಾರೆ. ಇವರು ಒಲಂಪಿಕ್ಸ್‌ಗಳಲ್ಲಿ ಹಲವು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. 2017 ರ ವಿಶ್ವ ಚಾಂಪಿಯನ್‌ಶಿಪ್ ನಂತರ ಕ್ರೀಡೆಯಿಂದ ನಿವೃತ್ತರಾದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ:

ಇತ್ತೀಚೆಗೆ ಕೆಲವು ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಅವರು ಅತಿರೇಕದ ವ್ಯಾಯಾಮಗಳಿಂದಾಗಿ ಒಂದೇ ಒಂದು ಫ್ಲೋರ್ ಕೂಡ ಹತ್ತಲು ಆಗುವುದಿಲ್ಲ ಎಂದು ಹರಡಲಾದ ಮಾಹಿತಿ ನಿಜವಲ್ಲ. ಉಸೇನ್ ಬೋಲ್ಟ್ ಅವರು ಆರೋಗ್ಯವಾಗಿದ್ದಾರೆ ಮತ್ತು ಅವರ ಆರೋಗ್ಯದ ಬಗ್ಗೆ ಹರಡುವ ಸುಳ್ಳು ಮಾಹಿತಿಯನ್ನು ನಂಬಬೇಡಿ ಎಂದು ಸರ್ಚ್‌ ಇಂಜಿನ್‌ ಮಾಹಿತಿ ನೀಡಿದೆ.

ಇದನ್ನೂ ಓದಿ:Gold Price: ನೀವು ಇಂದು ಒಂದು ಕೆಜಿ ಚಿನ್ನ ಖರೀದಿಸಿದರೆ 2050ರಲ್ಲಿ ಅದರ ಬೆಲೆ ಎಷ್ಟಾಗಬಹುದು?

ಒಟ್ಟಾರೆಯಾಗಿ, ಉಸೇನ್ ಬೋಲ್ಟ್ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಈ ನಿವೃತ್ತ ಅಥ್ಲೀಟ್ ಕ್ರೀಡಾ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.