Petrol Bunk: `ಪೆಟ್ರೋಲ್ ಬಂಕ್’ ಗಳಲ್ಲಿ ಈ 6 ಸೇವೆಗಳು ಉಚಿತ

Share the Article

Petrol Bunk: ವಾಹನ ಸವಾರರೇ ನೀವು ಯಾವುದೇ ಪೆಟ್ರೋಲ್ ಪಂಪ್‌ನಲ್ಲಿ (Petrol Bunk) ಈ ಆರು ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

ಹೌದು, ಪೆಟ್ರೋಲ್ ಪಂಪ್ ಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್, ಕುಡಿಯುವ ನೀರು ಸೇರಿದಂತೆ 6 ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಪೆಟ್ರೋಲ್ ಬಂಕ್ ಗಳಲ್ಲಿ ಈ 6 ಸೌಲಭ್ಯ ಉಚಿತ:

1. ಗುಣಮಟ್ಟ ಮತ್ತು ಪ್ರಮಾಣ ಪರಿಶೀಲನೆ

ಇಂಧನದ ಗುಣಮಟ್ಟದ ಬಗ್ಗೆ ಸಂಶಯ ಇರುವವರಿಗೆ ಯಾವುದೇ ನಿಲ್ದಾಣದಲ್ಲಿ ಪೆಟ್ರೋಲ್ ಅಥವಾ ಡೀಸೆಲ್‌ಗಾಗಿ ಫಿಲ್ಟರ್ ಪೇಪರ್ ಪರೀಕ್ಷೆಯನ್ನು ಕೇಳಬಹುದು ಮತ್ತು ಅದನ್ನು ಯಾವುದೇ ಶುಲ್ಕವಿಲ್ಲದೆ ಮಾಡಲಾಗುತ್ತದೆ.

2. ಪ್ರಥಮ ಚಿಕಿತ್ಸಾ ಕಿಟ್

ರಸ್ತೆ ಅಪಘಾತಗಳು ಎಲ್ಲಿಯಾದರೂ ಸಂಭವಿಸಿದಾಗ ಆ ಸಮಯದಲ್ಲಿ ನಿಮ್ಮ ಹತ್ತಿರದ ಪೆಟ್ರೋಲ್ ಪಂಪ್‌ಗೆ ಹೋಗಿ ಪ್ರಥಮ ಚಿಕಿತ್ಸೆ ಕಿಟ್ ಪಡೆಯಬಹುದು.

3. ತುರ್ತು ಕರೆ

ನೀವು ಅಪಘಾತಕ್ಕೊಳಗಾದವರ ಸಂಬಂಧಿಕರಿಗೆ ಕರೆ ಮಾಡಬೇಕಾಗಿದ್ದರೂ ಅಥವಾ ಸಹಾಯಕ್ಕಾಗಿ ನಿಮ್ಮ ಸ್ನೇಹಿತರಿಗೆ ಕರೆ ಮಾಡಬೇಕಾಗಿದ್ದರೂ, ಪೆಟ್ರೋಲ್ ಪಂಪ್‌ಗಳು ನಿಮಗೆ ಉಚಿತ ಫೋನ್ ಕರೆಯನ್ನು ನೀಡುತ್ತವೆ.

4. ವಾಶ್ ರೂಮ್

ಪೆಟ್ರೋಲ್ ಪಂಪ್ ಶೌಚಾಲಯಗಳಲ್ಲಿ ನೀವು ಯಾವುದೇ ಹಣವನ್ನು ಪಾವತಿಸದೆ ಉಪಯೋಗಿಸಬಹುದು. ಶೌಚಾಲಯಗಳನ್ನು ಬಳಸಲು ನೀವು ಅಲ್ಲಿ ಗ್ರಾಹಕರಾಗಿರಬೇಕಾಗಿಲ್ಲ.

5. ಕುಡಿಯಲು ಶುದ್ಧ ನೀರು:

ಶುದ್ಧ ಕುಡಿಯುವ ನೀರಿನ ಅಲ್ಲಿಯೇ ಸೇವಿಸಬಹುದು. ಅಥವಾ ನಿಮ್ಮ ಬಾಟಲಿಗಳನ್ನು ನೀರಿನಿಂದ ತುಂಬಿಸಬಹುದು.

6. ಟೈರ್‌ಗಳಿಗೆ ಉಚಿತ ಗಾಳಿ

ಪೆಟ್ರೋಲ್ ಬಂಕ್‌ಗಳಲ್ಲಿ ನಿಮ್ಮ ಟೈರ್‌ಗಳಲ್ಲಿ ಗಾಳಿ ತುಂಬಲು ನೀವು ಹಣ ಪಾವತಿಸಬೇಕಿಲ್ಲ.

ಇದನ್ನೂ ಓದಿ:Bank: ಈ 8 ಬ್ಯಾಂಕ್ ಖಾತೆಗಳಲ್ಲಿ ಇನ್ಮುಂದೆ `ಕನಿಷ್ಠ ಬ್ಯಾಲೆನ್ಸ್’ ನಿಯಮವಿಲ್ಲ

Comments are closed.