DA, DR: ನೌಕರರು, ಪಿಂಚಣಿದಾರರಿಗೆ ದೀಪಾವಳಿ ಬಿಗ್ ಗಿಫ್ಟ್ – ಶೇ. 3 ರಷ್ಟು DA, DR ಹೆಚ್ಚಳಕ್ಕೆ ಸರ್ಕಾರ’ ಗ್ರೀನ್ ಸಿಗ್ನಲ್.!

DA, DR: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ (ಡಿಎ) ಶೇ.3 ರಷ್ಟು ಹೆಚ್ಚಳವನ್ನು ಅನುಮೋದಿಸಿದೆ.

ಹೌದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ಯಲ್ಲಿ ಶೇ. 3 ರಷ್ಟು ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಿಗೆ ಮುಂಚಿತವಾಗಿ ಡಿಎ ಹೆಚ್ಚಳವಾಗಿದೆ.
ಅಂದಹಾಗೆ ತುಟ್ಟಿ ಭತ್ಯೆಯು ಜುಲೈ 1 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಒಂದು ವೇಳೆ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕರೆ, ಇದು ಈ ವರ್ಷದಲ್ಲಿ ಕೇಂದ್ರದ ಸರ್ಕಾರಿ ನೌಕರರಿಗೆ ಎರಡನೇ ಬಾರಿಗೆ ಸಿಹಿಸುದ್ದಿ ಸಿಕ್ಕಂತಾಗಲಿದೆ. ಮಾರ್ಚ್‌ನಲ್ಲಿ ಶೇಕಡಾ ಎರಡರಷ್ಟು ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಲಾಗಿತ್ತು. ಮೂಲ ವೇತನದ ಶೇಕಡಾ 53 ರಿಂದ ಶೇಕಡಾ 55 ಕ್ಕೆ ಡಿಎ ಹೆಚ್ಚಿಸಲಾಗಿತ್ತು. 60,000 ರೂಪಾಯಿ ಮೂಲ ವೇತನ ಹೊಂದಿರುವ ಉದ್ಯೋಗಿಗೆ ಹೆಚ್ಚುವರಿಯಾಗಿ 34,800 ರೂಪಾಯಿ ಡಿಎ ನೀಡಲಾಗುತ್ತದೆ. ಇದು ಮಾರ್ಚ್‌ನಲ್ಲಿ ನೀಡಲಾಗುತ್ತಿದ್ದ 33,000 ರೂಪಾಯಿಗಳಿಗಿಂತ ಹೆಚ್ಚಾಗಿದೆ.
ಇದನ್ನೂ ಓದಿ:ALERT: ಈ ‘ನಂಬರ್’ಗಳಿಂದ ಕರೆಗಳನ್ನು ‘ರಿಸೀವ್’ ಮಾಡಿದ್ರೆ ನಿಮ್ಮ ಖಾತೆಯೇ ಖಾಲಿ!
ಇನ್ನು ಈ ಹೆಚ್ಚಳವು 7ನೇ ವೇತನ ಆಯೋಗದ ಅಡಿಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ₹30,000 ಮೂಲ ವೇತನ ಹೊಂದಿರುವ ಉದ್ಯೋಗಿಗೆ ತಿಂಗಳಿಗೆ ಹೆಚ್ಚುವರಿಯಾಗಿ ₹900 ಸಿಗುತ್ತದೆ, ಆದರೆ ₹40,000 ಗಳಿಸುವವರಿಗೆ ₹1,200 ಹೆಚ್ಚಿಗೆ ಸಿಗುತ್ತದೆ. ಮೂರು ತಿಂಗಳ ಅವಧಿಯಲ್ಲಿ, ಬಾಕಿ ಮೊತ್ತವು ₹2,700 ರಿಂದ ₹3,600 ಕ್ಕೆ ಏರುತ್ತದೆ – ಇದು ಸಕಾಲಿಕ ಹಬ್ಬದ ಪರಿಹಾರವನ್ನು ಒದಗಿಸುತ್ತದೆ. ಈ ಹೆಚ್ಚಳದಿಂದ ಸುಮಾರು 48 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎನ್ನಲಾಗಿದೆ.
Comments are closed.