Delhi : ದೆಹಲಿ ಬಾಬಾನಿಂದ ದುಬೈ ಶೇಖ್‌ಗೆ ಹುಡುಗಿಯರನ್ನು ಸಪ್ಲೈ ? ವಾಟ್ಸಾಪ್ ಚಾಟ್‌ನಲ್ಲಿ ಭಯಾನಕ ಸಂಗತಿ ಬಯಲು!

Share the Article

Delhi: ಇತ್ತೀಚೆಗೆ ದೆಹಲಿಯ (Delhi) ಚೈತನ್ಯಾನಂದ ಸರಸ್ವತಿ ಸ್ವಾಮೀಜಿ (Chaithyananda swami) ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು, ಈ ಸುದ್ದಿ ಸದ್ದು ಮಾಡ್ತಿದ್ದಂತೆ ದೆಹಲಿಯ ವಸಂತ್‌ ಕುಂಜ್‌ನ ಪ್ರತಿಷ್ಠಿತ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯನ್‌ ಮ್ಯಾನೇಜ್ಮೆಂಟ್ ಸ್ವಾಮೀಜಿಗೆ ಗೇಟ್‌ ಪಾಸ್‌ ನೀಡಿತ್ತು. ಬಳಿಕ ಈ ಸ್ವಾಮೀಜಿಯ ಬಂಧನವೂ ಆಗಿತ್ತು. ಇದೀಗ ಚೈತನ್ಯಾನಂದ ಸರಸ್ವತಿ (Swami Chaitanyananda Saraswati) ಬಂಧನದ ಬಳಿಕ ಯುವತಿಯರ ಮೇಲೆ ಅವರು ಮಾಡುತ್ತಿದ್ದ ಶೋಷಣೆ ಒಂದೊಂದಾಗಿ ಹೊರ ಬರುತ್ತಿದೆ.

ಹೌದು, ಸ್ವಾಮೀಜಿಯ ವಾಟ್ಸಪ್ ಚಾಟ್ ಮುಖಾಂತರ ಅವರ ಕರ್ಮಕಾಂಡ ಬಯಲಾಗಿದ್ದು, ಇದರಲ್ಲಿ ದುಬೈ ಶೇಖ್ (Dubai Sheikh) ಒಬ್ಬನಿಗೆ ಲೈಂಗಿಕ ಸಂಬಂಧಕ್ಕಾಗಿ ಹುಡುಗಿ ಬೇಕು ಎನ್ನುವ ಸಂದೇಶವೊಂದಿದ್ದು, ಇದು ಸ್ವಾಮಿ ಚೈತನ್ಯಾನಂದ ಸರಸ್ವತಿಯ ಅಕ್ರಮ ವ್ಯವಹಾರಗಳ ಕುರಿತು ಮತ್ತಷ್ಟು ತನಿಖೆಗೆ ಒತ್ತಾಯಿಸಿದೆ.

ಇದಕ್ಕೆ ಸಾಕ್ಷಿಯಾಗಿ ಇದೀಗ ಆತನ ವಾಟ್ಸಾಪ್ ಚಾಟ್‌ಗಳು ಲಭ್ಯವಾಗಿವೆ.ಚೈತನ್ಯಾನಂದ ಸರಸ್ವತಿಯು ದುಬೈ ಶೇಖ್ ಸಂಪರ್ಕವಿರುವ ವ್ಯಕ್ತಿ, ವಿದ್ಯಾರ್ಥಿಯೊಂದಿಗೆ ಮಾತನಾಡಿರುವುದು ಈ ಚಾಟ್ ಗಳ ಮೂಲಕ ತಿಳಿದು ಬಂದಿದೆ. ಈ ಚಾಟ್ ನಲ್ಲಿ ವಿದ್ಯಾರ್ಥಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಇದರಲ್ಲಿ ದೆಹಲಿ ಬಾಬಾ ಸ್ವೀಟಿ, ಬೇಬಿ, ಡಾಟರ್, ಡಾಲ್ ನಂತಹ ಪದಗಳಲ್ಲಿ ಆಕೆಯನ್ನು ಪದೇ ಪದೇ ಸಂಬೋಧಿದ್ದಾನೆ. ಈ ಚಾಟ್ ಗಳು ಹಗಲು, ರಾತ್ರಿ ನಡೆದಿದೆ.

ಇದನ್ನೂ ಓದಿ:Bigg Boss: ಬಿಗ್ ಬಾಸ್ ಮನೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮಲ್ಲಮ್ಮ – ಸ್ವತಃ ಬಿಗ್ ಬಾಸೇ ಶಾಕ್

ಅಲ್ಲದೆ ಇನ್ನೊಂದು ಸಂದೇಶದಲ್ಲಿ, ಬೇಬಿ ನೀನು ಎಲ್ಲಿದ್ದೀಯಾ?, ಗುಡ್ ಮಾರ್ನಿಂಗ್ ಬೇಬಿ, ನನ್ನ ಮೇಲೆ ಯಾಕೆ ಕೋಪಗೊಂಡಿದ್ದೀಯಾ?, ಶುಭ ಸಂಜೆ ನನ್ನ ಅತ್ಯಂತ ಪ್ರೀತಿಯ ಪುಟ್ಟ ಮಗಳ ಗೊಂಬೆ.. ಹೀಗೆ ಅನೇಕ ಚಾಟ್ ಗಳು ತನಿಖಾಧಿಕಾರಿಗಳ ಕೈ ಸೇರಿವೆ.

Comments are closed.