Meter Readers: 3 ತಿಂಗಳ ಸರಾಸರಿ ಪರಿಗಣಿಸಿ ಗ್ರಾಹಕರಿಗೆ ಮುಂದಿನ ತಿಂಗಳು ವಿದ್ಯುತ್‌ ಬಿಲ್‌, ಮೀಟರ್‌ ರೀಡರುಗಳು ಬರಲ್ಲ

Share the Article

Meter Readers: ತಂತ್ರಾಂಶ ಉನ್ನತೀಕರಣ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ಪರಿಗಣಿಸಿ ಮುಂದಿನ ತಿಂಗಳ ವಿದ್ಯುತ್‌ ಬಿಲ್‌ ನೀಡಲಾಗುವುದು.

ಬೆಸ್ಕಾಂ ಮಾಹಿತಿ ತಂತ್ರಜ್ಞಾನ ವಿಭಾಗ ಕೈಗೊಂಡ ಸಾಫ್ಟ್‌ವೇರ್‌ ಉನ್ನತಿ ಕಾರ್ಯ ಪ್ರಗತಿಯಲ್ಲಿದೆ. ಬಿಲ್ಲಿಂಗ್‌ ತಂತ್ರಜ್ಞಾನದ ಸುಧಾರಣೆ ಕೆಲಸ ಕೈಗೆತ್ತಿಗೊಂಡಿದೆ. ಹೀಗಾಗಿ ಅಕ್ಟೋಬರ್‌ 1 ರಿಂದ 15 ರ ವರೆಗಿನ ನಿಗದಿತ ಅವಧಿಯಲ್ಲಿ ಮೀಟರ್‌ ರೀಡರ್‌ಗಳು ಜಿಬಿಎ ವ್ಯಾಪ್ತಿಯಲ್ಲಿ ಮೀಟರ್‌ ಮಾಪನಕ್ಕೆ ಬರುವುದಿಲ್ಲ. ಬದಲಿಗೆ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ಲೆಕ್ಕ ಹಾಕಿ ವಿದ್ಯುತ್‌ ಬಿಲ್‌ ನೀಡಲಾಗುವುದು.

ಇದನ್ನೂ ಓದಿ:RBI MPC Meet: ಸಿಹಿ ಸುದ್ದಿ, ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ಬೆಸ್ಕಾಂ ಮಿತ್ರ ಆಪ್‌, ಉಪವಿಭಾಗ ಕೇಂದ್ರ, ಯುಪಿಐ ಆಪ್‌ಗಳ ಮೂಲಕ ಬಿಲ್‌ ಪಾವತಿ ಮಾಡಬಹುದಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಸರಾಸರಿ ಬಿಲ್‌ ನೀಡುವ ಪ್ರಕ್ರಿಯೆಯಿಂದ ಗೃಹಜ್ಯೋತಿ ಫಲಾನುಭವಿಗಳು ಲಾಭ ಪಡೆಯುವಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಬೆಸ್ಕಾಂನಿಂದ ಸ್ಪಷ್ಟ ಪಡಿಸಲಾಗಿದೆ.

Comments are closed.