Corporation Board: 4 ನಿಗಮ ಮಂಡಳಿಗೆ ಪದಾಧಿಕಾರಿಗಳ ನೇಮಕ: ಯಾರಿಗೆ ಯಾವ ಜವಾಬ್ದಾರಿ?

Share the Article

Corporation Board: 4 ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕವಾಗಿದೆ. ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಡ್ಯದ ಎಂ.ಎಸ್‌.ಆತ್ಮಾನಂದ, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸುಜ್ಞಾನಮೂರ್ತಿ ಅವರ ನೇಮಕ ಮಾಡಲಾಗಿದೆ.

ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆ.ವಿ.ರಾಮಪ್ರಸಾದ್‌ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಜಿ.ವಿ.ಬಾಲಾಜಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ:Bigg Boss Kannada Season 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12: ತಮಾಷೆ ಮಾಡಲು ಹೋಗಿ ಅಮಾಸೆ ಆಗಿದೆ, ದೊಡ್ಮನೆಯಲ್ಲಿ ಮೊದಲ ಜಗಳ ಪ್ರಾರಂಭ

ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್‌ ರಾಜ್‌ಮೌರ್ಯಗೆ, ಬಿಎಂಟಿಸಿ ಉಪಾಧ್ಯಕ್ಷ ಸ್ಥಾನ ನೀಡಿ ಸರಕಾರ ಆದೇಶ ನೀಡಿತ್ತು. ಆದರೆ ಅದಾಗಲೇ ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನಿಕೇತ್‌ ರಾಜ್‌ ಮೌರ್ಯಗೆ ಮುಜುಗರ ಉಂಟಾಗಿತ್ತು.

Comments are closed.