Mangaluru: KSRTC ದಸರಾ ವಿಶೇಷ ಪ್ಯಾಕೇಜ್ ಅ.7 ರವರೆಗೆ ವಿಸ್ತರಣೆ

Mangaluru: ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗದ ವತಿಯಿಂದ ಸೆ.22 ರಂದು ಆರಂಭಗೊಂಡಿರುವ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಅ.2 ರವರೆಗೆ ಕಾರ್ಯಾಚರಿಸಲು ಉದ್ದೇಶಿಸಿದ್ದ ಮಂಗಳೂರು-ಮಡಿಕೇರಿ, ಮಂಗಳೂರು-ಸಿಗಂದೂರು ಹಾಗೂ ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸನವನು ಅ.7 ರವರೆಗೆ ವಿಸ್ತರಣೆ ಮಾಡಲಾಗಿದೆ.

ಸೆ.22 ರಿಂದ 29 ರವರೆಗೆ ಸಿಗಂದೂರು, ಕೊಲ್ಲೂರು, ಕಟೀಲು, ಮಡಿಕೇರಿ, ಉಡುಪಿ-ಕೊಲ್ಲೂರು, ಉಡುಪಿ-ಶೃಂಗೇರಿಗೆ ಒಟ್ಟು 112 ಬಸ್ಸುಗಳಲ್ಲಿ 4,533 ಪ್ರಯಾಣಿಕರು/ಪ್ರವಾಸಿಗರು ಪ್ರಯಾಣ ಮಾಡಿದ್ದಾರೆ. ಎಂಟು ದಿನಗಳಲ್ಲಿ ಒಟ್ಟು 27,56,793 ರೂ. ಸಂಗ್ರಹವಾಗಿದ್ದು, ಈ ಕುರಿತು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:Hubballi: ಮಹಿಳೆಯರ ಒಳ ಉಡುಪು ಕದ್ದು ಪರಾರಿಯಾಗುತ್ತಿದ್ದ ವ್ಯಕ್ತಿ ಅರೆಸ್ಟ್
Comments are closed.