Kantara Chapter 1: ಕಾಂತಾರ ಸಿನಿಮಾದ ಮೇಲೆ ಶೇ.100 ಸುಂಕ, ಕಾಂತಾರ 1 ಚಿತ್ರದ ಕಥೆ?

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ ಎಲ್ಲಾ ವಿದೇಶಿ ನಿರ್ಮಿತ ಸಿನಿಮಾಗಳ ಮೇಲೆ ಶೇಕಡ ನೂರಕ್ಕೆ100ರಷ್ಟು ಸುಂಕ ಘೋಷಿಸಿದ್ದಾರೆ. ಇದು ಅಮೆರಿಕದಲ್ಲಿ ವಿದೇಶಿ ಸಿನಿಮಾಗಳ ಪ್ರದರ್ಶನವನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಅಮೆರಿಕದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ವಿದೇಶಿ ಸಂಸ್ಥೆಗಳು ಕದಿಯುತ್ತಿವೆ ಎಂದು ಅವರು ಆರೋಪಿಸಿದ್ದು ಇದನ್ನು ಅವರು ಮಗುವಿನ ಕೈಯಿಂದ ಕ್ಯಾಂಡಿಯನ್ನು ಕದಿಯುವುದಕ್ಕೆ ಹೋಲಿಸಿದ್ದಾರೆ.

ಇದಕ್ಕಾಗಿ ಅವರು ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಪಕ್ಷದ ಗವರ್ನರ್ ರನ್ನು ದೂಷಿಸಿ, ಈ ಅಂತ್ಯವಿಲ್ಲದ ಸಮಸ್ಯೆಯನ್ನು ಪರಿಹರಿಸಲು ವಿದೇಶಿ ನಿರ್ಮಿತ ಚಲನಚಿತ್ರಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ವಿಧಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಇದರ ಎಫೆಕ್ಟ್ ಕಾಂತಾರ ಚಿತ್ರಕ್ಕೂ ತಟ್ಟಲಿದೆ.
“ಇತರ ದೇಶಗಳು ಯುನೈಟೆಡ್ ಸ್ಟೇಟ್ಸ್ನಿಂದ ಚಲನಚಿತ್ರ ನಿರ್ಮಾಣ ವ್ಯವಹಾರವನ್ನು ಕದ್ದಿವೆ. ಅದು ಮಗುವಿನಿಂದ ಕ್ಯಾಂಡಿಯನ್ನು ಕದಿಯುವಂತೆಯೇ. ಕ್ಯಾಲಿಫೋರ್ನಿಯಾವು ಅದರ ದುರ್ಬಲ ಮತ್ತು ಅಸಮರ್ಥ ಗವರ್ನರ್ನಿಂದಾಗಿ, ತೀವ್ರ ಹೊಡೆತಕ್ಕೆ ಒಳಗಾಗಿದೆ.
ಆದುದರಿಂದ, ಈ ದೀರ್ಘಕಾಲದ, ಎಂದಿಗೂ ಮುಗಿಯದ ಸಮಸ್ಯೆಯನ್ನು ಪರಿಹರಿಸಲು, ನಾನು ಯುನೈಟೆಡ್ ಸ್ಟೇಟ್ಸ್ನ ಹೊರಗೆ ನಿರ್ಮಿಸಲಾದ ಎಲ್ಲಾ ಚಲನಚಿತ್ರಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ವಿಧಿಸುತ್ತಿದ್ದೇನೆ. ಈ ವಿಷಯದ ಬಗ್ಗೆ ನನ್ನ ಗಮನ ತಂದುದಕ್ಕೆ ನಿಮಗೆ ಧನ್ಯವಾದಗಳು. ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠಗೊಳಿಸಿ” ಎಂದು ಟ್ರಂಪ್ ಟ್ರೂತ್ ಸೋಶಿಯಲ್ನಲ್ಲಿ ಬರೆದಿದ್ದಾರೆ.
ಅಮೆರಿಕ ಚಲನಚಿತ್ರೋದ್ಯಮ ಮತ್ತು ವಿಡಿಯೋ ನಿರ್ಮಾಣ ಉದ್ಯಮವು 2025ರ ವೇಳೆಗೆ 40 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಲ್ಲದೆ ಒಟ್ಟು ಮನರಂಜನಾ ಮಾರುಕಟ್ಟೆಯು 2023ರಲ್ಲಿ 103 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿತ್ತು.
Comments are closed.