Home News Ration card: ‘ಜಾತಿ‌ ಗಣತಿ’ ಸಮೀಕ್ಷೆ ವೇಳೆ ‘ರೇಷನ್ ಕಾರ್ಡ್’ ರದ್ದು ಮಾಡಲ್ಲ: ಸರ್ಕಾರ ಸ್ಪಷ್ಟನೆ

Ration card: ‘ಜಾತಿ‌ ಗಣತಿ’ ಸಮೀಕ್ಷೆ ವೇಳೆ ‘ರೇಷನ್ ಕಾರ್ಡ್’ ರದ್ದು ಮಾಡಲ್ಲ: ಸರ್ಕಾರ ಸ್ಪಷ್ಟನೆ

Hindu neighbor gifts plot of land

Hindu neighbour gifts land to Muslim journalist

Ration card: ಬೆಂಗಳೂರು (Bangalore) ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿದ್ದು, ಕೆಲವು ಸಾರ್ವಜನಿಕರು ಗಣತಿದಾರರು ತಮ್ಮ ಪಡಿತರ ಚೀಟಿಯ (Ration card) ರದ್ದತಿಗೆ ಬಂದಿದ್ದಾರೆಂಬ ತಪ್ಪು ಕಲ್ಪನೆಯಿಂದ ಸರಿಯಾದ ಮಾಹಿತಿ ನೀಡಲು ಸಹಕರಿಸದೆ ಸಮೀಕ್ಷೆಗೆ ಅಡ್ಡಿಯಾಗುತ್ತಿರುವುದು ಕಂಡುಬಂದಿರುತ್ತದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಹಿಂದುಳಿದ ವರ್ಗಗಳ ಹಾಗೂ ಇತರೆ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವನ್ನು ಸಂಗ್ರಹಿಸಲು ಮಾತ್ರ ನಡೆಸಲಾಗುತ್ತಿದೆ.

ಯಾವುದೇ ಪಡಿತರ ಚೀಟಿ ರದ್ದತಿ (cancel) ಕಾರ್ಯವನ್ನು ಸಮೀಕ್ಷೆಯಲ್ಲಿ ಮಾಡಲಾಗುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:KKRTC: ಕೆಕೆಆರ್ ಟಿಸಿ ಡಿಸಿ ಸಸ್ಪೆಂಡ್ ಮಾಡುವಂತೆ ಸಚಿವ ಜಮೀರ್ ಅಹ್ಮದ್ ಸೂಚನೆ

ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಯೋಜನೆಗಳನ್ನು ರೂಪಿಸಲು ಈ ದತ್ತಾಂಶ ಸಹಕಾರಿಯಾಗಲಿದೆ. ಆದ್ದರಿಂದ ಸಾರ್ವಜನಿಕರು ಈ ಸಮೀಕ್ಷೆ ಬಗ್ಗೆ ಯಾವುದೇ ತಪ್ಪು ಕಲ್ಪನೆ ಅಥವಾ ವದಂತಿಗಳಿಗೆ ಕಿವಿಕೊಡದೇ ನಿಶ್ಚಿಂತೆಯಿಂದ ಭಾಗವಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.