School: ದಸರಾ ರಜೆ ಮುಗಿಯುವ ಮುನ್ನವೇ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್‌ ನ್ಯೂಸ್‌

Share the Article

School: ರಾಜ್ಯದಲ್ಲಿ ದಸರಾ (dasra) ರಜೆ ಮುಗಿಯಲು ಇನ್ನೂ ಕೆಲವೇ ದಿನಗಳು ಬಾಕಿಯಿರುವಾಗಲೇ ಶಾಲಾ ಮಕ್ಕಳಿಗೆ ಶಿಕ್ಷಣ ಇಲಾಖೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ರಾಜ್ಯದ ಶಾಲಾ (School) ಮಕ್ಕಳಿಗೆ ಸಂಭ್ರಮ ಶನಿವಾರ’ (ಬ್ಯಾಗ್ ರಹಿತ ದಿನ) ಕಾರ್ಯಕ್ರಮದ ವರದಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಶಾಲಾ ಬ್ಯಾಗ್ ಹೊರೆಯನ್ನು ತಗ್ಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರದ ದಿನದಂದು ಬ್ಯಾಗ್ ರಹಿತ ದಿನವನ್ನು ಆಚರಣೆ ಮಾಡುವಂತೆ ಉಲ್ಲೇಖ-1ರ ಪತ್ರದಲ್ಲಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ:Crockery Set Buying Tips: ನಿಮ್ಮ ಅಡುಗೆಮನೆಗೆ ಪಾತ್ರೆಗಳ ಸೆಟ್ ಖರೀದಿ ಮಾಡುವಿರಾ? ಹಾಗಾದರೆ ಈ ಟಿಪ್ಸ್‌ ನಿಮಗಾಗಿ

ಅದರಂತೆಯೇ ಪ್ರಸಕ್ತ ಸಾಲಿನಲ್ಲಿ ಕ್ರಮವಹಿಸಲು ಉಲ್ಲೇಖ-2 ರ ಸುತ್ತೋಲೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ. ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು, ವಿವಿಧ ಥೀಮ್‌ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾದರಿಗಳು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು ಡಿಸರ್ಟ್‌ ವತಿಯಿಂದ ಸಿದ್ಧಪಡಿಸಲಾಗಿದೆ.

Comments are closed.