HRMS Information: ರಾಜ್ಯ ಸರಕಾರಿ ನೌಕರರಿಗೆ ಮಹತ್ವದ ಮಾಹಿತಿ

HRMS Information: ಎಲ್ಲಾ ಪ್ರಮುಖ ಬ್ಯಾಂಕ್ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಾಡು ಮಾಡಲು ಸರಕಾರ ತಿಳಿಸಿದೆ.

ಪ್ರತಿಯೊಬ್ಬ ಸರಕಾರಿ ನೌಕರರು ತಮ್ಮ ESS Login ನಲ್ಲಿ PMJJBY ಹಾಗೂ PMSBY ಮಾಹಿತಿಯನ್ನು ತುಂಬಬೇಕು, ನಂತರ submit ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:06/09/2023 ರನ್ನಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ – ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ ಖಾತೆ ಬ್ಯಾಂಕ್ ಮುಖಾಂತರ ಪಡೆಯಬಹುದಾಗಿದೆ. ಹೆಚ್ಚಿನ ವಿವರಕ್ಕಾಗಿ https://www.jansuraksha.gov.in/৩০ .ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮ ಯೋಜನೆ (ಪಿಎಂಜೆಜೆಬಿವೈ)
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ರೂ.436/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ) ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನರೆವು. ಈ ಯೋಜನೆಯು 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಸಿ)
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಸಿವೈ) ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ.20/-ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00ಲಕ್ಷಗಳು ಹಾಗೂ ಶಾಶ್ವತ ಭಾಗಶ: ಅಂಗವೈಕಲ್ಯಕ್ಕೆ ರೂ.1.00 ಲಕ್ಷಗಳ ವಿಮಾ ಮೊತ್ತದ ನರೆವು ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ. ಇವೆರಡು ಭಿಮಾ ಯೋಜನೆಗಳು ನಿಮ್ಮ ಕುಟುಂಬಕ್ಕೆ ಬಹಳ ಉಪಯುಕ್ತವಾಗುವುದು.
ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ:02/11/2023 ರನ್ನಯ, ಪಿಎಂಜೆಜೆಬಿವೈ ಮತ್ತು ಪಿಎಂಎ ವೈ ವಿಮಾ ವಿವರಗಳನ್ನು ಹೆಚ್ಆರ್ಎಂಎಸ್ ಇಎಸ್ಎಸ್ ಲಾಗಿನ್ https://hrmsess.karnataka.gov.in ನ ಪೋರ್ಟಲ್ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್ಎಸ್ ಪೋರ್ಟಲ್ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ.
https://hrmsess.karnataka.gov.in/login/loadLoginPage
Comments are closed.