ಯಾವಾಗ PF ಹಿಂಪಡೆಯಬಹುದು? ಸುಳ್ಳು ಕಾರಣ ನೀಡಿ ಪಿಎಫ್ ಹಣ ಹಿಂಪಡೆದರೆ ಶಿಕ್ಷೆ – EPFO ಇಲಾಖೆ ಎಚ್ಚರಿಕೆ

ನವದೆಹಲಿ: EPFO ನಿಯಮಗಳ ಪ್ರಕಾರ, ಸದಸ್ಯರು ತಮ್ಮ ಹಣವನ್ನು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಹಿಂಪಡೆಯಲು ಅನುಮತಿಸಲಾಗಿದೆ. ಆ ಸ್ಪಷ್ಟ ಕಾರಣಗಳು ಯಾವುವು ಎಂದರೆ:

ನಿವೃತ್ತಿ ಅಥವಾ ನಿರುದ್ಯೋಗ: ನಿವೃತ್ತಿಯ ಸಮಯದಲ್ಲಿ ಅಥವಾ ಓರ್ವ ವ್ಯಕ್ತಿಯು ಎರಡು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದರೆ ಪೂರ್ಣ ಹಿಂಪಡೆಯುವಿಕೆಯನ್ನು ಪಡೆಯಲು ಅನುಮತಿಸಲಾಗಿದೆ.
ಭಾಗಶಃ ಹಿಂಪಡೆಯುವಿಕೆಗಳು: ಮನೆ ಖರೀದಿಸಲು, ಮನೆ ನವೀಕರಿಸಲು, ಸಾಲಗಳನ್ನು ಮರುಪಾವತಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ, ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಅಥವಾ ಸ್ವಂತ ವಿವಾಹ ವೆಚ್ಚಗಳಿಗೆ ಮಾತ್ರ ಪಿಎಫ್ ಹಣ ಪಡೆಯಲು ಸಾಧ್ಯ.
ಕೆಲಸಕ್ಕೆ ರಾಜೀನಾಮೆ: ರಾಜೀನಾಮೆಯ ನಂತರ ಎರಡು ತಿಂಗಳು ಹೊಸ ಉದ್ಯೋಗಕ್ಕೆ ಕಾದ ನಂತರ ಮಾತ್ರ ಸದಸ್ಯರುಗಳು ತಮ್ಮ PF ಮೊತ್ತವನ್ನು ಹಿಂಪಡೆಯಬಹುದು. ಪಿಎಫ್ ಸದಸ್ಯರು ಈ ಅರ್ಹತೆ ಮತ್ತು ಹಿಂಪಡೆಯುವಿಕೆ ಮಿತಿಗಳನ್ನು ಪೂರೈಸಿದರೆ, ಈಗ ಅನುಮತಿಸಲಾದ ಮುಂಗಡಗಳನ್ನು ಪಡೆಯಲು ಯಾವುದೇ ದಾಖಲೆಗಳ ಅಗತ್ಯವಿಲ್ಲ ಎಂದು EPFO ಇಲಾಖೆ ತಿಳಿಸಿದೆ.
ನೆನಪಿಡಬೇಕಾದ ತೆರಿಗೆ ನಿಯಮಗಳು
ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಮೊದಲು PF ಹಣವನ್ನು ಹಿಂಪಡೆಯಲಾಗಿದ್ದರೆ, ಅದು ತೆರಿಗೆಗೆ ಒಳಪಡುತ್ತದೆ. ಮೂಲದಲ್ಲಿಯೇ ತೆರಿಗೆ ಕಡಿತ (TDS) ಮಾಡಲಾಗುತ್ತದೆ.
PF ಹಣ ದುರುಪಯೋಗ: ವಸೂಲಿ ಮತ್ತು ದಂಡ:
ಒಂದು ವೇಳೆ ಭವಿಷ್ಯ ನಿಧಿಯ ಖಾತೆದಾರ ತಾನು ಹಿಂಪಡೆಯಲಾದ PF ಹಣವನ್ನು ತಪ್ಪು ಉದ್ದೇಶಕ್ಕಾಗಿ ಬಳಸುವುದು ಕಠಿಣ ತೆಗೆದುಕೊಳ್ಳಲಾಗುತ್ತದೆ ಎಂದು EPFO ಇಲಾಖೆ ಸ್ಪಷ್ಟಪಡಿಸಿದೆ. 1952 ರ ಇಪಿಎಫ್ ಯೋಜನೆಯ ನಿಯಮ 68 ಬಿ (11) ರ ಅಡಿಯಲ್ಲಿ: ಇಪಿಎಫ್ಒ ದಿಂದ ದುರುಪಯೋಗಪಡಿಸಿಕೊಂಡ ಹಣವನ್ನು ದಂಡದ ಬಡ್ಡಿಯೊಂದಿಗೆ ಮರುಪಡೆಯಲು ಕಾನೂನಿನಲ್ಲಿ ಅವಕಾಶವಿದೆ.
ಅಲ್ಲದೆ ಸದಸ್ಯರಿಗೆ 3 ವರ್ಷಗಳವರೆಗೆ ಅಥವಾ ವಸೂಲಾತಿ ಪೂರ್ಣಗೊಳ್ಳುವವರೆಗೆ ಮತ್ತೆ ಯಾವುದೇ ಹಿಂಪಡೆಯುವಿಕೆಗೆ ಅವಕಾಶವಿರುವುದಿಲ್ಲ.
ಉದಾಹರಣೆಗೆ, ಒಂದು ವೇಳೆ. ಪಿಎಫ್ ಸದಸ್ಯರು ಮನೆ ನಿರ್ಮಾಣವನ್ನು ಉಲ್ಲೇಖಿಸಿ ಹಣವನ್ನು ಹಿಂತೆಗೆದುಕೊಂಡರೆ ಅಥವಾ ಅದನ್ನು ಬೇರೆಡೆಗಳಲ್ಲಿ ಖರ್ಚು ಮಾಡಿದರೆ, ಹಿಂಪಡೆಯುವಿಕೆಯನ್ನು ಉಲ್ಲಂಘನೆ ಎಂದು ಗುರುತಿಸಲಾಗುತ್ತದೆ ಮತ್ತು ವಸೂಲಾತಿ ಕ್ರಮ ಪ್ರಾರಂಭವಾಗುತ್ತದೆ ಎಂದು ಇಲಾಖೆ ತಿಳಿಸಿದೆ.
‘ಪಿಎಫ್ ನಿಮ್ಮ ಜೀವಮಾನದ ಸುರಕ್ಷತಾ ಗುರಾಣಿ’ ಎಂದ EPFO:
ಇಪಿಎಫ್ಒ ತನ್ನ ಇತ್ತೀಚಿನ ಎಕ್ಸ್ ಪೋಸ್ಟ್ನಲ್ಲಿ ಈ ರೀತಿ ಹೇಳಿದೆ: “ತಪ್ಪು ಕಾರಣಗಳಿಗಾಗಿ ಪಿಎಫ್’ನ್ನು ಹಿಂಪಡೆಯುವುದು ಇಪಿಎಫ್ ಯೋಜನೆ 1952 ರ ಅಡಿಯಲ್ಲಿ ಶಿಕ್ಷೆಗೆ ಕಾರಣವಾಗಬಹುದು. ನಿಮ್ಮ ಭವಿಷ್ಯವನ್ನು ರಕ್ಷಿಸಿ, ಸರಿಯಾದ ಅಗತ್ಯಗಳಿಗಾಗಿ ಮಾತ್ರ ಪಿಎಫ್ ಅನ್ನು ಬಳಸಿ. ನಿಮ್ಮ ಪಿಎಫ್ ನಿಮ್ಮ ಜೀವಮಾನದ ಸುರಕ್ಷತಾ ಗುರಾಣಿ!” ಎಂದಿದೆ ಇಪಿಎಫ್ಒ.
Comments are closed.