Suryakumar Yadav: ಏಷ್ಯಾ ಕಪ್ ಪಂದ್ಯದ ಶುಲ್ಕವನ್ನು ಪಹಲ್ಗಾಮ್ ಸಂತ್ರಸ್ತರಿಗೆ ಮತ್ತು ಭಾರತೀಯ ಸೇನೆಗೆ ಅರ್ಪಿಸಿದ ಸೂರ್ಯಕುಮಾರ್ ಯಾದವ್

Share the Article

Suryakumar Yadav: ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಜಯಗಳಿಸಿದ ನಂತರ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಹೃದಯಸ್ಪರ್ಶಿ ಹೆಜ್ಜೆ ಇಟ್ಟರು. ತಮ್ಮ ಸಂಪೂರ್ಣ ಏಷ್ಯಾಕಪ್ ಪಂದ್ಯದ ಶುಲ್ಕವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡರು.

https://twitter.com/surya_14kumar/status/1972411938354458733

ಭಾರತದ ನಾಯಕ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಪಹಲ್ಗಾಮ್‌ನಲ್ಲಿ ಮೃತರ ಎಲ್ಲರೂ ಯಾವಾಗಲೂ ನನ್ನ ಆಲೋಚನೆಗಳಲ್ಲಿ ಉಳಿಯುತ್ತಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ:Actor Veer Sharma: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಸಾವನ್ನಪ್ಪಿದ ಖ್ಯಾತ ಬಾಲ ನಟ, ಸಹೋದರ

ಏಷ್ಯಾಕಪ್‌ನಲ್ಲಿ ಭಾರತೀಯ ಆಟಗಾರರು ಪ್ರತಿ ಪಂದ್ಯಕ್ಕೆ INR 4 ಲಕ್ಷ ಗಳಿಸಲಿದ್ದಾರೆ ಅವರು ಪಂದ್ಯಾವಳಿಯಲ್ಲಿ ಒಟ್ಟು ಏಳು ಪಂದ್ಯಗಳಲ್ಲಿ ಸ್ಪರ್ಧಿಸಿದ್ದಾರೆ, ಅಂದರೆ ಸೂರ್ಯಕುಮಾರ್ ಪಹಲ್ಗಾಮ್ ಸಂತ್ರಸ್ತರಿಗೆ ಮತ್ತು ಭಾರತೀಯ ಸೇನೆಗೆ INR 28 ಲಕ್ಷ ದೇಣಿಗೆ ನೀಡಲಿದ್ದಾರೆ.

Comments are closed.