Karnataka: ಪೊಲೀಸ್ ಎಸ್‌ಐ, ಕಾನ್‌ಸ್ಟೆಬಲ್ ನೇಮಕಾತಿ ವಯೋಮಿತಿ ಸಡಿಲಿಕೆ

Karnataka: ಪೊಲೀಸ್ ಸಬ್ ಇನ್‌ಸ್ಪೆಕ್ಟರ್(SI) ಮತ್ತು ಕಾನ್‌ಸ್ಟೆಬಲ್ ನೇಮಕಾತಿ ವಯೋಮಿತಿ ಸಡಿಲಿಕೆಗೆ ಗೃಹ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

ಪೊಲೀಸ್ ಇಲಾಖೆಯಲ್ಲಿ(police department) ಖಾಲಿ ಇರುವ ಎಸ್‌ಐ ಮತ್ತು ಕಾನ್‌ಸ್ಟೆಬಲ್ ಹುದ್ದೆ ಗಳ ನೇರ ನೇಮಕಾತಿಗೆ ಎರಡು ವರ್ಷಗಳ ವಯೋಮಿತಿ ಸಡಿಲಿಕೆ ಮಾಡುವಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಗೃಹ ಸಚಿವ ಡಾ| ಪರಮೇಶ್ವರ್ ಆದೇಶಿಸಿದ್ದಾರೆ.
ಪಿಎಸ್‌ಐ ನೇಮಕಾತಿಗೆ ಗರಿಷ್ಠ ವಯೋಮಿತಿ ಎಸ್‌ಸಿ(SC), ಎಸ್‌ಟಿ (ST) ಮತ್ತು ಹಿಂದು ಳಿದ ವರ್ಗಕ್ಕೆ 30ರಿಂದ 32 ವರ್ಷಕ್ಕೆ ಮತ್ತು ಇತರ ವರ್ಗಕ್ಕೆ 28ರಿಂದ 30ಕ್ಕೆ ಪರಿಷ್ಕರಣೆ ಮಾಡಲಾಗಿದೆ.
ಇದನ್ನೂ ಓದಿ;BMTC: BMTC ನೂತನ ಅಧ್ಯಕ್ಷರಾಗಿ ನಿಕೇತ್ ರಾಜ್ ಅಧಿಕಾರ ಸ್ವೀಕಾರ
ಇನ್ನು ಕಾನ್‌ಸ್ಟೆಬಲ್ ಹುದ್ದೆಗಳ ಗರಿಷ್ಠ ವಯೋಮಿತಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಕ್ಕೆ 27ರಿಂದ 30 ವರ್ಷಕ್ಕೆ ಹಾಗೂ ಇತರ ವರ್ಗಕ್ಕೆ 25ರಿಂದ 27ಕ್ಕೆ ಪರಿಷ್ಕರಿಸಲಾಗಿದೆ.
Comments are closed.