Whatsapp: ವಾಟ್ಸಪ್ ನಲ್ಲಿ `ಆಧಾರ್ ಕಾರ್ಡ್’ ಡೌನ್ ಲೋಡ್ ಮಾಡಲು ಸಾಧ್ಯ

Whatsapp: ಇನ್ಮುಂದೆ ಆಧಾರ್ ಡೌನ್ಲೋಡ್ ಮಾಡಲು ವೆಬ್ಸೈಟ್ಗೆ ಲಾಗಿನ್ (login) ಆಗುವ ಅಥವಾ ಅಪ್ಲಿಕೇಶನ್ ಅನ್ನು ಪ್ರವೇಶಿಸುವ ಅಗತ್ಯವಿಲ್ಲ. ಅದರಲ್ಲೂ ಸೈಬರ್ ಸೆಂಟರ್ ಗೆ ಹೋಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಇನ್ಮುಂದೆ ಆಧಾರ್ ಕಾರ್ಡ್ಗಳನ್ನು ನಿಮ್ಮ WhatsApp ನಿಂದ ನೇರವಾಗಿ ಡೌನ್ಲೋಡ್ ಮಾಡಬಹುದು.

WhatsApp ನಿಂದ ಆಧಾರ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು
WhatsApp ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್(download) ಮಾಡಲು ಮೊದಲು, ನೀವು UIDAI ನಂಬರ್ 9013151515 ನಿಮ್ಮ ಫೋನ್ನಲ್ಲಿ ಸೇವ್ ಮಾಡಬೇಕು, ಈಗ WhatsApp ತೆರೆಯಿರಿ ಮತ್ತು ಈ ಸಂಖ್ಯೆಗೆ “hai” ಎಂದು ಕಳುಹಿಸಿ. ನಂತರ ಚಾಟ್ಬಾಟ್ ಡಿಜಿಲಾಕರ್ ಆಯ್ಕೆಯನ್ನು ತೋರಿಸುತ್ತದೆ, ಅದನ್ನು ನೀವು ಕ್ಲಿಕ್(click) ಮಾಡಬೇಕಾಗುತ್ತದೆ. ನೀವು ಡಿಜಿಲಾಕರ್ ಖಾತೆಯನ್ನು ಹೊಂದಿಲ್ಲದಿದ್ದರೆ, ಹೊಸ ಖಾತೆಯನ್ನು ರಚಿಸಿ.
ಇದನ್ನೂ ಓದಿ:Veerendra Heggade : ಯಾವ ತಪ್ಪು ಮಾಡದ ನಮ್ಮ ಮೇಲೆ ಯಾಕಿಷ್ಟು ದ್ವೇಷ? ವೀರೇಂದ್ರ ಹೆಗ್ಗಡೆ ಬೇಸರ
ಅಲ್ಲಿ ನಿಮ್ಮ 12-ಅಂಕಿಯ ಆಧಾರ್ (Aadhaar) ಸಂಖ್ಯೆಯನ್ನು ಇಲ್ಲಿ ನಮೂದಿಸಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ(OTP) ಕಳುಹಿಸಲಾಗುತ್ತದೆ, ನಂತರ, ಡಿಜಿಲಾಕರ್ನಲ್ಲಿ ಲಭ್ಯವಿರುವ ದಾಖಲೆಗಳ ಪಟ್ಟಿ ತೆರೆಯುತ್ತದೆ, ಅದರಿಂದ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಆಯ್ಕೆ ಮಾಡಬಹುದು ಮತ್ತು ಅದನ್ನು ನೇರವಾಗಿ ನಿಮ್ಮ ಫೋನ್ಗೆ ಡೌನ್ಲೋಡ್ ಮಾಡಬಹುದು.
Comments are closed.