GST ಕಡಿತ – ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಬದಲಾವಣೆ?

Share the Article

GST : ಕೇಂದ್ರ ಸರ್ಕಾರವು GST ಪರಿಷ್ಕರಣೆ ಮಾಡಿದ್ದು, ದಿನನಿತ್ಯ ಬಳಕೆಯ ವಸ್ತುಗಳು ಸೇರಿ ಸುಮಾರು 400ಕ್ಕೂ ಹೆಚ್ಚು ವಸ್ತುಗಳ ಬೆಲೆಯಲ್ಲಿ ಅಗ್ಗವಾಗಿದೆ. ಇದೆಲ್ಲವೋ ಸೆಪ್ಟೆಂಬರ್ 22 ರಿಂದ ಜಾರಿಯಾಗಿದೆ. ಅಂತೆಯೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದಾದರು ಬದಲಾವಣೆಯಾಗಿದೆಯೇ ಎಂಬುದು ಸದ್ಯ ಕುತೂಹಲದ ವಿಚಾರ.

ಹೌದು, ಕಳೆದ ಎರಡು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದು, ಮೇ 2022 ರಲ್ಲಿ ಜಾರಿಗೆ ಬಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಕಡಿತಗಳು ಇದರ ಪ್ರಮುಖ ಪರಿಣಾಮ ಬೀರಿವೆ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಏರಿಳಿತಗಳು ನಡೆದರೂ, ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗಳು ತೀವ್ರವಾಗಿ ಬದಲಾಗಿಲ್ಲ.

ಇದನ್ನೂ ಓದಿ:SL Bhairappa : ಎಸ್ ಎಲ್ ಭೈರಪ್ಪ ಕಾದಂಬರಿಗಳಿಗೆ ಹೆಚ್ಚಿದ ಬೇಡಿಕೆ – ಹಲವು ಮಳಿಗೆಗಳಲ್ಲಿ ಪುಸ್ತಕಗಳೆ ಖಾಲಿ

ಅಂದಹಾಗೆ ತೈಲ ಕಂಪನಿಗಳು (ಒಎಂಸಿಗಳು) ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬೆಲೆ ಪಟ್ಟಿಯನ್ನು ಪ್ರಕಟಿಸುತ್ತಿರುವುದರಿಂದ ಈ ನಿಯಮಿತ ಪ್ರಕಟಣೆ ಬೆಲೆಗಳಲ್ಲಿ ಹೆಚ್ಚಳ ಅಥವಾ ಕುಸಿತವನ್ನು ಮಾರುಕಟ್ಟೆಗೆ ತಕ್ಷಣ ಪ್ರತಿಬಿಂಬಿಸುವಂತೆ ಮಾಡುತ್ತದೆ. ಹೊಸ ಜಿಎಸ್‌ಟಿ ದರ ಜಾರಿಗೆ ಬಂದರೂ ಪೆಟ್ರೋಲ್‑ಡೀಸೆಲ್ ಖರೀದಿ ಮಾಡುವ ಗ್ರಾಹಕರಿಗೆ ಯಾವುದೇ ತೀವ್ರ ಬದಲಾವಣೆ ಅನುಭವವಾಗಿಲ್ಲ. ಹೀಗಾಗಿ, ದಿನನಿತ್ಯದ ಪೇಟ್ರೋಲ್‑ಡೀಸೆಲ್ ಖರ್ಚಿನಲ್ಲಿ ತೀವ್ರ ಭಾರ ಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Comments are closed.